ಬೆಳಗಾವಿ: ಎಂಇಎಸ್ ಪುಂಡರ ಹಾವಳಿ ಮಿತಿಮೀರಿದೆ. ಅವರನ್ನ ತಡೆಯಬೇಕು, ಬ್ಯಾನ್ ಮಾಡ್ಬೇಕು ಅಂತ ಈಗಾಗಲೇ ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಈ ಸಂಬಂಧ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅವರ ಮೂರ್ತಿಯನ್ನ ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಇದು ಖಂಡನೀಯ ಎಂದಿದ್ದಾರೆ.
ವಿರೂಪಗೊಳಿಸಿದ ಪ್ರತಿಮೆಯನ್ನ ಪೊಲೀಸರು ಸರಿ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಯಾವುದೋ ಜಾತಿಗೆ ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಂತ ಸ್ವಾತಂತ್ರ್ಯ ಪ್ರೇಮಿ. ದೇಶಭಕ್ತ. ಅಂಥವರ ಪ್ರತಿಮೆಯನ್ನ ವಿಕೃತಗೊಳಿಸುವಂತವರು ಪುಂಡರಿರ್ತಾರೆ, ಇಲ್ಲ ಪೋಕರಿಗಳಿರ್ತಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಎಂಇಎಸ್ ನ ಬ್ಯಾನ್ ಮಾಡ್ಬೇಕು ಅನ್ನೋ ಒತ್ತಾಯವಿದೆ. ಅದನ್ನ ಸರ್ಕಾರದ ಗಮನಕ್ಕೆ ತರ್ತೇವೆ. ಪ್ರತಿಭಟನೆ ಮಾಡೋ ವಿಚಾರದಲ್ಲಿ ಕನ್ನಡಪರ ಸಂಘಟನೆಗಳಿಗೂ ಅವಕಾಶ ಮಾಡಿಕೊಡಬೇಕು. ಅನ್ಯಾವಾದಾಗ ಪ್ರತಿಭಟನೆ ಮಾಡೋದಕ್ಜೆ ಅವಕಾಶವಿರ್ಬೇಕು. ಎಂಇಎಸ್ ನವರು ಪುಂಡರು. ಅವರ ವಿರುದ್ಧ ಕಠಿಣವಾದಂತ ಕ್ರಮ ತೆಗೆದುಕೊಳ್ಳಬೇಕು.
ಆಯುಧಗಳನ್ನ ಹಿಡಿದುಕೊಂಡು ಬಂದು ವಿರೂಪಗೊಳಿಸ್ತಾರೆ ಅಂದ್ರೆ ಅದರ ಅರ್ಥ ಕಾನೂನಿನ ಸುವ್ಯವಸ್ಥೆ ಹಾಳಾಗಿದೆ ಅಂತಾನೆ. ಪೊಲೀಸಿನವರ ಬಗ್ಗೆ ಇವ್ರಿಗೆ ಭಯ ಇಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ ಎಂದಿದ್ದಾರೆ.