ಈಗಾಗಲೇ ರಾಜ್ಯದಲ್ಲೂ ಅಲ್ಲಲ್ಲೇ ಮಳೆಯಾಗುತ್ತಿದೆ. ಆದ್ರೆ ಮಾನ್ಸೂನ್ ಮಳೆ ಯಾವಾಗಿನಿಂದ ಕರ್ನಾಟಕ ಪ್ರವೇಶ ಮಾಡಲಿದೆ ಎಂದು ಎಲ್ಲರು ಕಾಯುತ್ತಿದ್ದಾರೆ.. ಈಗಾಗಲೇ ಮಾನ್ಸೂನ್ ಮಳೆ ಗುರುವಾರವೇ ಭಾರತಕ್ಕೆ ಪ್ರವೇಶ ಮಾಡಿದೆ. ಕೇರಳದಲ್ಲಿ ಈಗಾಗಲೇ ಮಾನ್ಸೂನ್ ಆರಂಭವಾಗಿದ್ದು, ಸಾಮಾನ್ಯಕ್ಕಿಂತ ಒಂದು ವಾರ ತಡವಾಗಿದೆ. ಆದರೆ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ.
ಸಾಮಾನ್ಯವಾಗಿ ಮಾನ್ಸೂನ್ ಮಳೆ ಜೂ 1ರಂದೇ ಮಳೆಯಾಗಬೇಕಿತ್ತು. ಆದರೆ ಈ ಬಾರಿಯ ಮಾನ್ಸೂನ್ ಒಂದು ವಾರ ತಡವಾಗಿ ಆರಂಭವಾಗಿದೆ. ನೈಋತ್ಯ ಮಾನ್ಸೂನ್ ದಕ್ಷಿಣ ಅರೇಬಿಯನ್ ಸಮುದ್ರ ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಸಮೀಪದ ಪ್ರದೇಶಗಳು, ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು, ಕೊಮೊರಿನ್ ಪ್ರದೇಶದ ಉಳಿದ ಭಾಗಗಳಲ್ಲಿ ಆರಂಭವಾಗಿದೆ.
ಇಂದು ಮನ್ನಾರ್ ಮತ್ತು ನೈಋತ್ಯ, ಮದ್ಯ ಮತ್ತು ನೈರುತ್ಯ, ಮದ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿತ್ತಿದೆ. ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಳಮಟ್ಟದಲ್ಲಿ ಪಶ್ಚಿಮ ದಿಕ್ಕಿನ ಮಾರುತಗಳ ಬಲ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.