Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ನವರಿಗೆ ಯಾವ ಸಿದ್ದಾಂತ ಇದೆ: ಸಿದ್ದರಾಮಯ್ಯ ಪ್ರಶ್ನೆ

Facebook
Twitter
Telegram
WhatsApp

ಬೆಂಗಳೂರು: ಜೆಡಿಎಸ್ನವರು ಏನೇ ಮಾಡಲಿ, ಅವರು ಬಿಜೆಪಿ ಜೊತೆಗೇ ಸೇರಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಈ ವೇಳೆ ಮಾಧ್ಯ,ಮಗಳ ಜೊತೆಗೆ ಮಾತನಾಡಿದ ಅವರು, ಇವರಿಗೆ ಯಾವ ಸಿದ್ಧಾಂತವಿದೆ. ಅಲ್ಪಸಂಖ್ಯಾತರು ಬಹಳ ಬುದ್ಧಿವಂತರಿದ್ದಾರೆ. ಜೆಡಿಎಸ್ ನವರಿಗೆ ಅಷ್ಟು ಈಸಿಯಾಗಿ ಒಲಿಯಲ್ಲ. ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದರು.

ಇನ್ನೂ ಬಿಜೆಪಿ ಜೊತೆ ಸೇರಿದ ಮೇಲೆ ಸೆಕ್ಯೂಲರ್ ಆಗ್ತಾರಾ? ಜೆಡಿಎಸ್ ಜಾತ್ಯಾತೀತ ಪಾರ್ಟಿಯಲ್ಲ. ಪ್ರಾದೇಶಿಕ ಪಾರ್ಟಿ ನಿಜ. ಆದರೆ, ಸೆಕ್ಯೂಲರ್ ಅಲ್ಲ. ಹೆಸರು ಮಾತ್ರ ಜಾತ್ಯಾತೀತ. ನಡವಳಿಕೆ ಮಾತ್ರ ಕೋಮುವಾದಿ ಎಂದು ಹರಿಹಾಯ್ದಿದ್ದಾರೆ.ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ವಿಚಾರ ಕುರಿತು ಮಾತನಾಡಿ, ನಾನು ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಲ್ಲ. ಅವರು ಕಾಂಗ್ರೆಸ್ ಎಂಎಲ್ ಸಿ ಅಷ್ಟೇ ಎಂದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸ್ತೇನೆಂಬ ಸಚಿವ ಕೆ. ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅಧಿಕಾರದ ಮದ ಅವರಿಗಿದೆ. ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. 2023 ಕ್ಕೆ ಮನೆಗೆ ಹೋಗ್ತಾರೆ. ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದರು.ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ.

ಈ ಬಾರಿ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರವಾದ ಅಲೆ ಇದೆ. ನಾವು ಸೀರಿಯಸ್ ಆಗಿಲ್ಲ ಅಂದರೆ ಹೇಗೆ ಎಂದು ಹೇಳಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರ ಮಾತನಾಡಿ, ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು. ಜನ ಎಲ್ಲವನ್ನ‌ ಸಹಿಸಿಕೊಂಡ್ರೆ ಹೇಗೆ? ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು. ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು. ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯಮೃತ್ಯುಂಜಯ ಶ್ರೀಗಳ ಹೇಳಿಕೆ ಕೇಳಿದ್ದೇನೆ. ಪಂಚಮಸಾಲಿಗೆ ಬದ್ಧ ಆಗಿದ್ದಾರೆ. ಸರ್ಕಾರ ಮೀಸಲಾತಿ ಬಗ್ಗೆ ಕಮಿಟ್ ಆಗಿದೆ. ಹಾಗಾಗಿ ಅದನ್ನ ಮಾಡಬೇಕಾಗುತ್ತದೆ. ಶ್ರೀಗಳು ಸರ್ಕಾರಕ್ಕೆ ಪಾಠ ಕಲಿಸಲಿ ಬೇಕಾದ್ರೆ ಎಂದು ಶ್ರೀಗಳ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ ?

ಸುದ್ದಿಒನ್ | ಯಾರಾಗಲಿದ್ದಾರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಎಂಬ ಚರ್ಚೆ ಇದೀಗ ಮಹಾರಾಷ್ಟ್ರದಲ್ಲಷ್ಟೇ ಅಲ್ಲ, ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿಗೇ ಸ್ಪರ್ಧಿಸಿ ಗೆದ್ದ ಮೂರೂ ಪಕ್ಷಗಳು ಈಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿವೆ.

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ರೇಟ್ ಎಷ್ಟು ?

    ಸುದ್ದಿಒನ್, ಚಿತ್ರದುರ್ಗ, ನವಂಬರ್. 25 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ ಉತ್ಪನ್ನಗಳ (ಸರಕು) ಇಂದಿನ               (

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

error: Content is protected !!