ಬಳ್ಳಾರಿ: ಇಂದು ಬಿಜೆಪಿ ಪಕ್ಷದಿಂದ ನವಶಕ್ತಿ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಶ್ರೀರಾಮನಿಗೆ ನ್ಯಾಯ ಕೊಟ್ಟಿದ್ದು, ಹನುಮನಿಗೆ ಶಕ್ತಿ ಕೊಟ್ಟಿದ್ದು ಬಿಜೆಪಿ ಪಕ್ಷ. ಲಂಕಾದಹನ ಮಾಡಿದಂತೆ ಮುಂದೆ ಕಾಂಗ್ರೆಸ್ ದಹನ ಮಾಡುವುದಕ್ಕೆ ಈ ಸಮಾವೇಶದಿಂದ ಆರಂಭವಾಗಲಿದೆ ಎಂದಿದ್ದಾರೆ.
ವಾಲ್ಮೀಕಿ ಸಮಾವೇಶಕ್ಕೆ ಹತ್ತು ಲಕ್ಷ ಜನ ಬಂದಿದ್ದಾರೆ ಈ ಜನಸಂಖ್ಯೆಯನ್ನು ನೋಡಿದರೆ ನಮ್ಮ ನಡೆ ಸಾಮಾಜಿಕದ ಕಡೆ ಎಂಬುದು ಅರಿವಾದಂತಿದೆ. ಇವತ್ತು ಸಾರ್ಥಕ ಸಮಾವೇಶ ನಡೆಯುತ್ತಿದೆ. ಏಳು ಸಾವಿರ ಬೇಡರ ಪಡೆಗಳು ವಿಜಯನಗರ ಸಾಮ್ರಾಜ್ಯವನ್ನು ಯಾವ ರೀತಿ ಮುಂದುವರೆಸಿಕೊಂಡು ಬಂದಿದ್ದೇವೋ ಅದೇ ರೀತಿ, ಮುಂದಿನ ಚುನಾವಣೆಯ ಬಿಜೆಪಿಯನ್ನು ನಮ್ಮ ಸಮುದಾಯ ನಡೆಸಬೇಕು ಎಂದರು.
ನಾವೂ ದೇಶಕ್ಕೋಸ್ಕರ ವಾಜಪೇಯಿ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ. ಈಗ ನಮ್ಮ ದಕ್ಷಿಣದ ವಾಜಪೇಯಿ ನಮ್ಮ ಸಿಎಂ ಆಗಿದ್ದಾರೆ. ಕಾಂಗ್ರೆಸ್ ನವರು ಮೀಸಲಾತಿ ನೀಡದೆ ನಿದ್ದೆ ಮಾಡಿದರು. ಆದ್ರೆ ನಮ್ಮ ಸರ್ಕಾರ ಎಸ್ಟಿ ಸಮುದಾಯಕ್ಕೆ 3 ರಿಂದ 7ರಷ್ಟು ಮೀಸಲಾತಿ ನೀಡಿದೆ ಎಂದಿದ್ದಾರೆ.