ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಫ್ರೀಯಾಗಿ ಬಸ್ ಸೇವೆಯನ್ನು ನೀಡಿದೆ. ಆದ್ರೆ ಪುರುಷರಿಗೆ ಯಾವಿದೇ ರೀತಿಯ ಉಚಿತ ಸೇವೆ ನೀಡಿಲ್ಲ. ಇದರ ನಡುವೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಶೇಕಡ 15 ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಈ ಸಂಬಂಧ ಇದೀಗ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ಪ್ರತಿಭಟನೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿಯನ್ನು ಮರೆತಿದ್ರು. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರು ಕೂಡ ಬಸ್ ದರ ಹೆಚ್ಚಳ ಮಾಡಿದ್ರು. ಆಗ ಜನರಿಗೆ ತೊಂದರೆಯಾಗುತ್ತೆ ಅಂತ ಅವರಿಗೆ ಗೊತ್ತಿರಲಿಲ್ವಾ. ನಮ್ಮ ಮೇಲೆ 5,900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಬಿಜೆಪಿ ಸರ್ಅಕರ ನಾವೂ ಬಂದಾಗ ಅಷ್ಟು ಕೋಟಿ ಸಾಲವನ್ನ ಇಟ್ಟೋಗಿತ್ತು.
9 ವರ್ಷಗಳಿಂದ ಪೆಟ್ರೋಲ್ – ಡಿಸೇಲ್ ದರ ಇಳಿಸಿಯೇ ಇಲ್ಲ. ಗ್ಯಾಸ್ ಸಬ್ಸಿಡಿ ನಿಲ್ಲಿಸಿದಾಗ ಜನರ ಕಷ್ಟ ಗೊತ್ತಾಗ್ಲಿಲ್ವ ಆಗ. ನಾವೀಗ ದರ ಏರಿಕೆ ಮಾಡಿರೋದು ಮಾತ್ರವಲ್ಲ ಈ ಹಿಂದೆ ಬಿಜೆಪಿ ಕೂಡ ದರ ಏರಿಕೆ ಮಾಡಿತ್ತು. ಆಗ ಜನರ ಬಗ್ಗೆ ಕಾಳಜಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಸಾರಿಗೆ ಇಲಾಖೆಯಿಂದ ಈ ಮೊದಲೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಸಾರುಗೆ ದರ ಏರಿಕೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಸರ್ಕಾರ ಕೂಡ ಆ ಬಗ್ಗೆ ಒಪ್ಪಿಗೆ ಕೊಟ್ಟ ಮೇಲೆ ಈಗ ಶೇಕಡ 15 ರಷ್ಟು ದರವನ್ನು ಹೆಚ್ಚಳ ಮಾಡಿದೆ.