ಚಿತ್ರದುರ್ಗ : ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರ 68ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು. ಈ ವೇಳೆ ಗೋವಿಂದಪ್ಪ ಅವರಿಗೆ ಮತ ನೀಡುವಂತೆ ಜನರಲ್ಲಿ ಕೇಳಿಕೊಂಡರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾಸ್, ಪೆಟ್ರೋಲಿಯಂ, ಬೆಲೆ ಏರಿಕೆ ಮಾಡಿದ ಲೂಟಿ ಕೋರರು ಹೋಗುಬೇಕು, ತಿನ್ನುವ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ತಂದಿದ್ದಾರೆ. ಬರುವ ಮುಂದಿನ ಚುನಾವಣೆಯಲ್ಲಿ ಜಾತಿ, ಗಿತಿ ನೋಡಬೇಡಿ, ಗೋವಿಂದಪ್ಪಗೆ ವೋಟು ಹಾಕ್ತಿರಾ ಅಲ್ವಾ ಎಂದರು. ವಿಧಾನಸಭೆಯಲ್ಲಿ ಗೋವಿಂದಪ್ಪ ಇರಬೇಕು. ಹಿಂದೆ ಮಾಡಿದ ತಪ್ಪನ್ನು ಮತ್ತೆ , ತಪ್ಪು ಮಾಡಬೇಡಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತ್ ಜೋಡೊ ಯಾತ್ರೆ ಬಿಟ್ಟು, ಹೊಸದುರ್ಗ ಪಟ್ಟಣಕ್ಕೆ ಗೋವಿಂದಪ್ಪ ಅವರಿಗೆ ಜನ್ಮ ದಿನದ ಶುಭಾಶಯ ಕೋರಲು ಬಂದಿದ್ದೇನೆ. ಅದ್ದೂರಿಯಾಗಿ ಹುಟ್ಟು ಹಬ್ಬ ಮಾಡಿದ್ದಿರಿ, ಎಲ್ಲರಿಗೂ ಧನ್ಯವಾದಗಳು ಎಂದರು. ಬಿಜಿ ಅವರು ನನಗಿಂತ ಮೊದಲೇ 2006 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಕೆಲವೇ ಕೆಲವು ರಾಜಕಾರಣಿಗಳಲ್ಲಿ ಸರಳ ವ್ಯಕ್ತಿ ಗೋವಿಂದಪ್ಪ ಕೂಡ ಒಬ್ಬರಾಗಿದ್ದಾರೆ. ಮೂರು ಭಾರಿ ಶಾಸಕರು ಆದರೂ ಸಹ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರು ಸಹ ಜನರ ನಡುವೆ ಇದ್ದಾರೆ ಇದು ಬಹಳ ಮುಖ್ಯ ಎಂದು ತಿಳಿಸಿದರು.
ನಾನು ಸಿಎಂ ಆಗಿದ್ದಾಗ ಹೊಸದುರ್ಗ ಅಭಿವೃದ್ಧಿ ಸಂಬಂಪಟ್ಟ ಯಾವುದೇ ಪತ್ರ ಕೊಟ್ಟರು ಅನುದಾನ ಕೊಟ್ಟಿದ್ದೇನೆ. ಬಿಜಿ ಅವರು ಒಂದು ದಿನನೂ ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲಿಲ್ಲ. ನಾನು ಮುಖ್ಯಮಂತ್ರಿ ಆದಾಗ 15 ಲಕ್ಷ ಮನೆಗಳನ್ನು ನೀಡಿದ್ದೇನೆ
ಬಿಜೆಪಿಯವರ ಯೋಗ್ಯತೆಗೆ ನಾವು ಕೊಟ್ಟ ಗ್ರ್ಯಾಂಟ್ ಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.