ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಆ ಬಗ್ಗೆ ಈಗಾಗ್ಲೇ ಸಾಕಷ್ಟು ವಿರೋಧಗಳು ಎದುರಾಗಿವೆ. ಈ ಮಧ್ಯೆ ಮಾಜಿ ಕ್ಯಾಪ್ಟನ್ ಕಪಿಲ್ ದೇವ್, ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಇನ್ಮುಂದೆ ಗರ್ವ ಬಿಟ್ಟು ಆಟಗಾರರ ಕೆಳಗಡೆ ಆಡಬೇಕು. ಜೊತೆಗೆ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬೇಕು. ನಾನು ಕೂಡ ಶ್ರೀಕಾಂತ್ ಹಾಗೂ ಅಜಾರುದ್ಧಿನ್ ಕೆಳಗಡೆ ಆಡಿದ್ದೆ. ಗವಾಸ್ಕರ್ ನನ್ನ ನಾಯಕತ್ವದಡಿ ಆಡಿದ್ರು. ಕೊಹ್ಲಿ ಈಗ ಗರ್ವ ಬಿಡಬೇಕು.
ನಾನು ವಿರಾಟ್ ಕೊಹ್ಲಿ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಟಿ20 ನಾಯಕತ್ವ ತ್ಯಜಿಸಿದ ಬಳಿಕ ಕಠಿಣ ಪರಿಸ್ಥಿತಿಯಲ್ಲಿದ್ದಾರೆ. ಮೂರು ಮಾದರಿಯಿಂದಲೂ ಕೊಹ್ಲಿ ಕೆಳಗಿಳಿದಿದ್ದಾರೆ. ಇನ್ಮುಂದೆ ಕೊಹ್ಲಿ ಒಬ್ಬ ಸಾಮಾನ್ಯ ಆಟಗಾರನಷ್ಟೇ ಎಂದಿದ್ದಾರೆ.