ಸೌತ್ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಮದುವೆಯಾದ ಬಳಿಕ ವಿವಾದಕ್ಕೀಡಾಗಿದ್ದಾರೆ. ಅದು ತಿರುಪತಿ ದೇವಸ್ಥಾನಕ್ಕೆ ಹೋದ ವಿಚಾರಕ್ಕೆ.
ಈ ಮುಂಚೆ ನಯನತಾರಾ ಮತ್ತು ವಿಘ್ನೇಶ್ ತಿತುಪತಿಯಲ್ಲಿಯೇ ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ ಬಳಿಕ ಸೆಲೆಬ್ರೆಟಿಗಳು ಮದುವೆಗೆ ಬರುವುದಕ್ಕೆ ಕಷ್ಟವಾಗುತ್ತದೆ ಎಂದು ಮಹಾಬಲಿಪುರಂನ ರೆಸಾರ್ಟ್ ಒಂದಕ್ಕೆ ಶಿಫ್ಟ್ ಮಾಡಲಾಗುತ್ತು. ಆದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ದೇವಸ್ಥಾನದ ಆವರಣದಲ್ಲಿ ಫೋಟೋಶೂಟ್, ವಿಡಿಯೋ, ಧಾರಾವಾಹಿ, ಸಿನಿಮಾಗಳನ್ನ ಚಿತ್ರೀಕರಿಸಲು ಅನುಮತಿ ಇಲ್ಲ. ಆದರೂ ನಯನತಾರಾ ಮತ್ತು ವಿಘ್ನೇಶ್ ಫೋಟೋಶೂಟ್ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ನಯನತಾರಾ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡೆ ಫೋಟೋಶೂಟ್ ಮಾಡಿಸಿದ್ದಾರೆ. ಇದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ, ನಯನತಾರಾ ಮತ್ತು ವಿಘ್ನೇಶ್ ಕ್ಷಮೆಯಾಚಿಸಿದ್ದಾರೆ.