ದಾವಣಗೆರೆ: ಜಿಲ್ಲೆಯಲ್ಲಿ ಹರಜಾತ್ರಾ ಮಹೋತ್ಸವ ನಡೆಯಬೇಕಿತ್ತು. ಒಂದು ಕಡೆ ಕೊರಿನಾ ಹೆಚ್ಚಳ ಮತ್ತೊಂದು ಕಡೆ ಒಮಿಕ್ರಾನ್ ಭೀತಿಯಿಂದಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಹೀಗಾಗಿ ಸಭೆ ಸಮಾರಂಬ, ಜಾತ್ರಾ ಮಹೋತ್ಸವಕ್ಕೂ ಬ್ರೇಕ್ ಬಿದ್ದಿದೆ.
ಅಷ್ಟೇ ಅಲ್ಲ ಹರಜಾತ್ರಾ ಮಹೋತ್ಸವವನ್ನ ಮುಂದೂಡಿ ಎಂದು ಉಪರಾಷ್ಟಪತಿ ವೆಂಕಯ್ಯ ನಾಯ್ಡು ಕೂಡ ಸಲಹೆ ನೀಡಿದ್ದಾರೆ. ಈ ಜಾತ್ರೆ ಸಾಕಷ್ಟು ಪ್ರಖ್ಯಾತಿ ಪಡೆದಿರುವಂತದ್ದು. ಸಾಕಷ್ಟು ಜನ ಸೇರುತ್ತಾರೆ. ಹೀಗಾಗಿ ಜಾತ್ರೆಯನ್ನು ಮುಂದೂಡಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಜಾತ್ರೆಯಲ್ಲಿ ವೆಂಕಯ್ಯ ನಾಯ್ಡು ಕೂಡ ಭಾಗಿಯಾಗಬೇಕಿತ್ತು.
ಇದರ ಜೊತೆಗೆ ಉಪರಾಷ್ಟ್ರಪತಿಗಳಿಂದ ವಚನಾನಂದ ಸ್ವಾಮೀಜಿಗಳಿಗೆ ಸಂಸತ್ ಗೆ ಬರೋದಕ್ಕೆ ಕರೆ ನೀಡಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಕಾದ ಜೋಶಿಯವರಿಂದ ಸ್ವಾಮೀಜಿಗಳ ಯೋಗ ಮತ್ತು ಸಾಧನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆಜಾದಿ ಅಮೃತ ಮಹೋತ್ಸವದ ಹಿನ್ನೆಲೆ ಎಲ್ಲಾ ರೀತಿಯ ಮಾಹಿತಿ ಪಡೆದಿದ್ದಾರೆ. ಒಮಿಕ್ರಾನ್ ಭೀತಿ ಕಡಿಮೆಯಾದ ಕೂಡಲೇ ಹೊರಟು ಬನ್ನಿ ಎಂದು ಕರೆ ನೀಡಿದ್ದಾರೆ.