ಉಕ್ರೇನ್ ಚಿಕ್ಕ ರಾಷ್ಟ್ರ. ಅವರ ಸೇನೆಯೂ ಚಿಕ್ಕದಿದೆ. ರಷ್ಯಾ ಉಕ್ರೇನ್ ಗಿಂತ ಬಲಿಷ್ಠ ರಾಷ್ಟ್ರ. ಯುದ್ಧ ಘೋಷಿಸುವ ಸೂಚನೆ ಸಿಗುತ್ತಿದ್ದಂತೆ ಉಕ್ರೇನ್ ಕೂಡ ಹೆಚ್ಚೆ ಧೈರ್ಯ ಮಾಡಿದೆ. ಮೊದಲ ಎರಡು ದಿನದ ಯುದ್ಧ ನೋಡಿದಾಗ ಇನ್ನೇನು ಉಕ್ರೇನ್, ಪುಟೀನ್ ಮುಂದೆ ಶರಣಾಗಿಯೇ ಬಿಡುತ್ತೇನೋ ಎಂಬಂತ ಊಹೆಗಳು ಶುರುವಾಗಿದ್ದವು. ಆದ್ರೆ ಉಕ್ರೇನ್ ಅಧ್ಯಕ್ಷ ತನ್ನ ದೇಶ, ತನ್ನ ನಾಗರಿಕರ ಪರ ಹೋರಾಟಕ್ಕೆ ನಿಂತರು.
ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಜೆಲೆನ್ಸ್ಕಿ ಅದ್ಯಾವಾಗ ಸೈನಿಕರ ಮಧ್ಯೆ ನಿಂತು ಹೋರಾಡುವ ಹುಮ್ಮಸ್ಸು ಕೊಟ್ರೋ ಅಲ್ಲಿಂದ ಉಕ್ರೇನ್ ಸೋಲುವ ಭೀತಿಯಿಂದ ಹೊರಬಂದು ರಷ್ಯಾಗೆ ಸವಾಲೊಡ್ಡಿ ನಿಂತಿದೆ. ಪುಟ್ಟ ದೇಶವಾದ್ರೂ ಬಲಿಷ್ಠ ದೇಶವನ್ನ ಎದುರಿಸುತ್ತಿದೆ. ನಾಗರಿಕರು ಕೂಡ ಸೈನಿಕರಾಗಿ ನಿಂತು ದೇಶ ಕಾಪಾಡಿಕೊಳ್ಳುತ್ತಿದ್ದಾರೆ.
ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರಿಗೆ ಉಕ್ರೇನ್ ಸೂಕ್ತ ಶಸ್ತ್ರಾಸ್ತ್ರ ನೀಡುವುದಕ್ಕೆ ಸತತ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಬಿಯರ್ ಕಂಪನಿಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಸೂಚನೆ ನೀಡಿದೆ. ಈ ಹಿನ್ನೆಲೆ ಪೆಟ್ರೋಲ್ ಬಾಂಬ್ ತಯಾರಿಸಿ ನಾಗರಿಕರುಗೆ ಪೂರೈಕೆ ಮಾಡುತ್ತಿವೆ. ಬಿಯರ್ ಬಾಟಲಿಗೆ ಪೆಟ್ರೋಲ್ ಮತ್ತು ಆಯಿಲ್ ಮಿಕ್ಸ್ ಮಾಡಿ, ಮುಚ್ಚಳಕ್ಕೆ ಬಟ್ಟೆ ತುರುಕಲಾಗುತ್ತದೆ. ಬಟ್ಟೆ ನೆನೆದರೆ ಪೆಟ್ರೋಲ್ ಬಾಂಬ್ ರೆಡಿಯಾದಂತೆ. ಈ ಸಂಬಂಧ ಪೆಟ್ರೋಲ್ ಬಾಂಬ್ ತಯಾರು ಮಾಡಿದ ಕಂನಿಯೊಂದು ಹೇಳಿಕೊಂಡಿದೆ.