ಹಳೆ ನೆನಪಿನ ಬುನಾದಿಯ ಮೇಲೆ
ಬರುವವು ಹೊಸದಿನಗಳ ಆಲೆ
ಹೊಸತು ಬಯಸಿ ಬದುಕು ಸಾಗಿ
ರಸವದು ಹಳೆ-ಹೊಸಕ್ಷಣಗಳ ಮಿಲನವಾಗಿ
ಸಿಹಿ ಕಹಿಗಳು ಎರಡೂ ಬೇಕು
ಸಂಸ್ಕಾರದ ಸಹಬಾಳ್ವೆ ಸಾಕು
ಚಂದವಿದು ಅಂದವಿದು
ನವಚಿಗುರು ಅರಳಿ ಮರಳಿ
ಹಿಂದೆ ಸರಿದು ಹೋದ ಸಮಯ
ಬರುವ ದಿನದ ಸೊಗಸು ಕಲೆಯ
ಸುಖದಿ ಸವಿದು ಸಾಗಬೇಕಿದೆ
ದೇಶಸೇವೆಗಾಗಿ ನಾವು ಗೇಯ್ಯಬೇಕಿದೆ
ಬಂಧು ಮಿತ್ರರೆಲ್ಲ ಸೇರಿ
ಸ್ನೇಹಸಂಗದಿಂದ ಕೂಡಿ
ಯುಗಾದಿಯಂಥ ಹಬ್ಬ ಮಾಡಿ
ಬೇವುಬೆಲ್ಲ ಸವಿದು ನೋಡಿ
ನವ್ಯ ಕಾವ್ಯ ಕಟ್ಟಿ ಹಾಡಿ
ಉಯ್ಯಾಲೆಯಲ್ಲಿ ತೂಗಿ ಆಡಿ
ಮನಮನೆಯು ಹರ್ಷಗೊಳ್ಳಲಿ
ಭರತ ಖಂಡ ಭವ್ಯವಾದ ಬೆಳಗು ಕಾಣಲಿ
ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)
ಉಪನ್ಯಾಸಕರು ಹಾಗೂ ಸಾಹಿತಿಗಳು
ಹಿರೇಕುಂಬಳಗುಂಟೆ
ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆ
583218
8867435662
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…