ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆ ಎಸ್ ಈಶ್ಚರಪ್ಪ ಅವರು ಪಾಡು ಅಷ್ಟಿಷ್ಟಲ್ಲ. ತಮ್ಮ ಮೇಲಿನ ಪ್ರಕರಣಕ್ಕೆ ಕ್ಲೀನ್ ಚಿಟ್ ಸಿಕ್ಕರು ಸಚಿವ ಸ್ಥಾನ ಸಿಗದೆ ಇದ್ದದ್ದಕ್ಕೆ ತುಂಬಾ ಸಂಕಟ ಪಡುತ್ತಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರು ಕೂಡ, ಅಧಿವೇಶನಕ್ಕೆ ಗೈರಾಗಿ ಇಬ್ಬರು ಗುಪ್ತ ಸಭೆ ನಡೆಸಿದ್ದಾರೆ.
ಸ್ಪೀಕರ್ ಗೆ ಅಧಿವೇಶನಕ್ಕೆ ಗೈರಾಗುವ ಬಗ್ಗೆ ಪತ್ರ ಬರೆದಿದ್ದು, ರಮೇಶ್ ಜಾರಕಿಹೊಳಿ ಹಾಗೂ ಈಶ್ಚರಪ್ಪ ಇಬ್ಬರು ವಿಮಾನ ಹತ್ತಿದ್ದಾರೆ. ಒಂದೇ ವಿಮಾನದಲ್ಲಿ ಪಯಣ ಬೆಳೆಸಿದ್ದಾರೆ. ಈ ವೇಳೆ ಮಾಧ್ಯಮದವರು ಪ್ರಶ್ನೆಗೆ, ನಾನು ಜೂನಿಯರ್, ಈಶ್ವರಪ್ಪ ಅವರು ಸೀನಿಯರ್ ಅದಾರೆ. ವಿಚಾರ ಏನು ಅಂತ ಅವರನ್ನೇ ಕೇಳಿ ಅಂತ ಜಾರಿಕೊಂಡಿದ್ದಾರೆ. ಸೀದಾ ಅಲ್ಲಿಂದ ಬೆಂಗಳೂರಿಹೆ ಬಂದಿದ್ದು, ರಹಸ್ಯ ಸಭೆ ನಡೆಸಿದ್ದಾರೆ. ಇವರ ಜೊತೆಗೆ ಸಿ ಪಿ ಯೋಗಿಶ್ವರ್ ಸೇರುವ ಸಾಧ್ಯತೆಯೂ ಇದೆ.
ಚುನಾವಣೆ ಇನ್ನು ನಾಲ್ಕು ತಿಂಗಳು ಮಾತ್ರ ಇದೆ. ಆದ್ರೆ ಚುನಾವಣೆಗೂ ಮುನ್ನ ಮೂರು ತಿಂಗಳಾದರೂ ಸರಿ ಸಚಿವರಾಗಲೇಬೇಕೆಂಬುದು ಸಿಪಿ ಯೋಗೀಶ್ವರ್ ಹಠ. ಅತ್ತ ಗುತ್ತಿಗೆದಾರರಿಂದ ಕಮಿಷನ್ ತೆಗೆದುಕೊಳ್ಳುವ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕರೂ ಮತ್ತೆ ಸಚಿವ ಸ್ಥಾನ ನೀಡುತ್ತಿಲ್ಲ ಅಂತ ಈಶ್ಚರಪ್ಪ. ಮತ್ತೊಂದು ಕಡೆ ಸಿಡಿ ಕೇಸ್ ನಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಕೂಡ ಸಚಿವ ಸ್ಥಾನದ ಆಕಾಂಕ್ಷಿ.
ಮತ್ತೊಂದು ಕಡೆ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸಿಎಂ ಬೊಮ್ಮಾಯಿ ಅವರು ಹೈಕಮಾಂಡ್ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರಾ ಎಂಬ ಅನುಮಾನ. ಜೊತೆಗೆ ಚುನಾವಣೆ ಹತ್ತಿರವಿರುವ ಕಾರಣ ಪ್ರಚಾರದಲ್ಲೂ ಪಕ್ಷ ಬ್ಯುಸಿಯಾಗಲಿದೆ.