ತುಮಕೂರು: ಕೊರೊನಾ, ಲಾಕ್ಡೌನ್ ಆದ ಮೇಲಂತು ಕಳ್ಳತನ ಮಾಡುವವರು ಒಂಟಿ ಮನೆ ಅದರಲ್ಲು ಮನೆಗೆ ಬೀಗ ಹಾಕಿರುವುದನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇಂಥ ಅದೆಷ್ಟೋ ಕೇಸ್ ಗಳು ದಾಖಲಾಗಿವೆ. ಒಂದಷ್ಟು ದಿನ ಅದನ್ನ ಗೆಸ್ ಮಾಡ್ತಾರೆ, ಯಾರು ಇಲ್ಲದ ವೇಳೆ ಮನೆಗೆ ಕನ್ನ ಹಾಕ್ತಾರೆ. ಇದು ನಗರ ಪ್ರದೇಶದಲ್ಲಿ ಹೆಚ್ಚು ದಾಖಲಾಗ್ತಾ ಇದ್ದಂತ ಕೇಸ್. ಆದ್ರೆ ಈಗ ಹಳ್ಳಿ ಹಳ್ಳಿಯಲ್ಲೂ ಇದೀಗ ಈ ಕಳ್ಳರ ಕೈ ಚಳಕ ಜೋರಾಗಿದೆ.
ತುಮಕೂರಿನಲ್ಲಿ ಕಳೆದ ಮೂರು ದಿನಗಳಿಂದ ಈ ರೀತಿಯ ಕೇಸ್ ದಾಖಲಾಗುತ್ತಿದೆ. ತಿಪಟೂರು ತಾಲೂಕಿನ ಗ್ರಾಮಗಳಲ್ಲಿ ಇಂಥ ಘಟನೆ ನಡೆಯುತ್ತಿದೆ.ಬೀಗ ಹಾಕಿದ ಮನೆಗಳನ್ನೇ ಕಳ್ಳರು ಟಾರ್ಗೆಟ್ ಮಾಡ್ತಿದ್ದಾರೆ. ಈ ಹಿನ್ನೆಲೆ ನೊಣವಿನಕೆರೆ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಗ್ರಾಮಗಳಿಗೆ ದೊಡ್ಡ ಕಳ್ಳರ ಗ್ಯಾಂಗ್ ವೊಂದು ಬಂದಿದೆ ಎಚ್ಚರವಾಗಿರಿ ಎಂದು ಗ್ರಾಮ ಗ್ರಾಮಗಳಿಗೆ ತೆರಳಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಈಗಾಗಲೇ ನೊಣವಿನಕೆರೆಯ ಸುತ್ತಮುತ್ತಲಿನ 79 ಹಳ್ಳಿಗಳಿಗೆ ಈ ಕಳ್ಳರು ನುಗ್ಗಿದ್ದಾರಂತೆ. ಈ ಬಗ್ಗೆಯೂ ಪೊಲೀಸರು ಮಾಹಿತಿ ನೀಡಿದ್ದಾರೆ.