ಮೈಸೂರು: ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕೆ ಪಂಚಾಯ್ತಿ ವಿದ್ಯುತ್ ಸಂಪರ್ಕ ಕಟ್ ಮಾಡಿದ ಅಧಿಕಾರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಮಗೆ ತಾಕತ್ತಿದ್ದರೆ ಶ್ರೀಮಂತರ ಮಬೆಯ ಕರೆಂಟ್ ಕಟ್ ಮಾಡಿ ನೋಡೋಣಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಗ್ರಾಮ ಪಂಚಾಯ್ತಿಯ ವಿದ್ಯುತ್ ಬಿಲ್ ಕೋಟಿ ರೂಪಾಯಿ ದಾಟಿದೆ. ಆದ್ರೆ ಬಿಲ್ ಕಟ್ಟುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ ಗ್ರಾಮ ಪಂಚಾಯ್ತಿ ವಿದ್ಯುತ್ ಸಂಪರ್ಕವನ್ನ ಕಟ್ ಮಾಡಲಾಗಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ಶಾಸಕರು ಚೆಸ್ಕಾಂ ಅಧಿಕಾರಿ ದೀಪಕ್ ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಯತೀಂದ್ರ ಸಿದ್ದರಾಮಯ್ಯ ಚೆಸ್ಕಾಂ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದು, ನೀವೂ ಸರ್ಕಾರಿ ಕೆಲಸಕ್ಕೆ ಅನ್ ಫಿಟ್ ಎಂದಿದ್ದಾರೆ. ಬಾಯಿ ಮುಚ್ಚಿಕೊಳ್ರೀ.. ಏನ್ರೀ ನಿಮ್ಮ ಹೆಸರು.. ತಾಕತ್ತಿದ್ರೆ ಫ್ಯಾಕ್ಟರಿಗಳಿಗೆ ಹೋಗಿ ವಸೂಲಿ ಮಾಡಿ, ಶ್ರೀಮಂತರ ಮನೆಗಳಿಗೆ ಹೋಗಿ ಕರೆಂಟ್ ಕಟ್ ಮಾಡಿ ಎಂದು ಗರಂ ಆಗಿದ್ದರು.
ಚೆಸ್ಕಾಂ ಅಧಿಕಾರಿ ಶಾಸಕರಿಗೆ ವಿವರಣೆ ನೀಡಲು ಮುಂದಾಗಿದ್ದರು. ಕೋಟಿ ಕೋಟಿ ಹಣ ಬಾಕಿ ಇದೆ ಸರ್ ಎಂದು ಹೇಳಿದರು ಶಾಸಕರು ಕೇಳಲಿಲ್ಲ. ಕೋಟಿ ರೂಪಾಯಿ ಬಾಕಿ ಇದ್ದರೆ ಏನು..? ಕಂತಿನ ರೂಪದಲ್ಲಿ ಹಣ ಪಡೆಯಿರಿ. ಇಲ್ಲ 500 ಕೊಟ್ಟರು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.