Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಕ್ಫ್ ಆಸ್ತಿ | ಕಠಿಣ ಕ್ರಮಕ್ಕೆ ಮುಸ್ಲಿಂ ಮುಖಂಡರ ಒತ್ತಾಯ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

 

ಸುದ್ದಿಒನ್, ಚಳ್ಳಕೆರೆ, ನವೆಂಬರ್. 15b: ತಾಲೂಕಿನ ಚರ್ಮ ಕೈಗಾರಿಕೆ ಜಾಗ ಹಾಗೂ ಜನತಾ ಕಾಲೋನಿಯಲ್ಲಿರುವ ಚರ್ಮದ ಮಂಡಿ ಜಾಗ ಮತ್ತು ಜನತಾ ಕಾಲೋನಿ, ಮಸೀದಿ ಪಕ್ಕದಲ್ಲಿರುವ ಸಮುದಾಯ ಭವನವನ್ನು ವಕ್ಫ್ ಬೋರ್ಡ್ ಗೆ ಸೇರಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ನವೆಂಬರ್ 06, 2023ರಲ್ಲಿ ಚಳ್ಳಕೆರೆ ಜಾಮಿಯಾ ಮಸೀದಿ ವತಿಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂಬ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಅ.28ರಂದು ಹರಿದಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಮುಸ್ಲಿಂ ಸಮುದಾಯದ ಮುಖಂಡ ಹೆಚ್ಎಸ್ ಸೈಯದ್ ಸ್ಪಷ್ಟನೆ ನೀಡಿದರು.

ನಗರದ ಶಾದಿ ಮಹಲ್ ನಲ್ಲಿ ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಚಳ್ಳಕೆರೆ ನಗರದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರತೆ ಭಾವದಿಂದ ಜೀವನ ನಡೆಸುತ್ತಿದ್ದು ಸಮುದಾಯಗಳ ನಡುವೆ ದ್ವೇಷ ಭಾವನೆ ಉಂಟುಮಾಡುವ ಉದ್ದೇಶದಿಂದ ಇಂತಹ ನಕಲಿ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಅಂಶಗಳು ಪತ್ರದಲ್ಲಿ ಇರುವುದನ್ನು ಗಮನಿಸಿದ ಜಿಲ್ಲಾ ವಕ್ ಮಂಡಳಿಯವರು ಚಳ್ಳಕೆರೆ ಜಾಮಿಯ ಮಸೀದಿಯವರ ಮೂಲಕ ಅ.30 ರಂದು ನಗರಸಭೆಗೆ ಅರ್ಜಿ ಸಲ್ಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರದ ಧೃಡೀಕರಣ ಪ್ರತಿಯನ್ನು ನೀಡಲು ಮನವಿ ಮಾಡಿತ್ತು ಅದರಂತೆ ಬುಧವಾರ ನಗರಸಭೆಯಿಂದ ಹಿಂಬರಹ ನೀಡಿದ್ದು ನಗರಸಭೆ ದಾಖಲಾತಿಗಳ ಪ್ರಕಾರ ಮನವಿಯಲ್ಲಿ ಕೋರಿರುವಂತೆ ನಗರಸಭೆಯಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರಕ್ಕೂ ನಗರ ಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ದಾದಾಪೀರ್, ಅಲ್ಲಭಕಾಶ್, ಎಸ್ ಪಿ ಜುಬೇರ್, ಖಲಾಮಿ, ಸಲೀಂ, ಅನ್ವರ್, ರಶೀದ್ ,ಮೌಲಾನ ನೂರುಲ್ಲಾ, ದಾವೂದ್ ಮೌಲಾನ, ಬಶೀರ್ ಹಯಾತ್ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನ್ ದಾಸ್ ನೇಮಕ ಸಹಕಾರಿ : ಮಾಜಿ ಸಚಿವ ಎಚ್.ಆಂಜನೇಯ

ಸುದ್ದಿಒನ್, ದಾವಣಗೆರೆ, ನ.15 : ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ

ವಾಣಿ ವಿಲಾಸ ಕೋಡಿ ಬೀಳೋದಕ್ಕೆ ಇನ್ನೆಷ್ಟು ಅಡಿಗಳು ಬಾಕಿ ಇದೆ : ಇಂದಿನ ನೀರಿನ ಮಟ್ಟ ಎಷ್ಟು..?

ಚಿತ್ರದುರ್ಗ: ಕೋಟೆನಾಡಿನ ಜಿಲ್ಲೆಯ ಮಂದಿ ಕಾತುರದ ಕಣ್ಗಳಿಂದ ಕಾಯುತ್ತಿರುವ ದಿನ ಎಂದರೆ ಅದು ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಕ್ಷಣಕ್ಕಾಗಿ. ಚಿತ್ರದುರ್ಗ ರೈತರ ಜೀವನಾಡಿಯಾಗಿದೆ ವಾಣಿ ವಿಲಾಸ ಜಲಾಶಯ. ಇನ್ನು 1.95 ಅಡಿಯಷ್ಟು

ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಂದು ಕೂಡ ಇಳಿಕೆ : ಇಂದು ಎಷ್ಟಿದೆ ಮಾರುಕಟ್ಟೆ ದರ..?

ಚಿನ್ನ ಬೆಳ್ಳಿ ದರದಲ್ಲಿ ಸದ್ಯ ಕೆಲ ದಿನಗಳಿಂದ ಇಳಿಕೆಯಾಗುತ್ತಿದ್ದು ಮಹಿಳಾ‌ಮಣಿಗಳಿಗೆ ಸಂತಸ ತಂದಿದೆ. ಕೊಂಚವೇ ಕೊಂಚ ಇಳಿಕೆಯಾಗಿದ್ದರು ಹತ್ತು ಗ್ರಾಂ ಮೇಲೆ ದರ ಇಳಿಕೆ ಪ್ರಭಾವ ಬೀರುತ್ತದೆ. ಪ್ರಸ್ತುತ ಭಾರತದಲ್ಲಿ 10 ಗ್ರಾಂ ಚಿನ್ನದ

error: Content is protected !!