Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕೀಯ ಜೀವನದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಮತದಾರರ ಋಣ ತೀರಿಸಲು ಸಾಧ್ಯ :  ಶಾಸಕ ಎಂ.ಚಂದ್ರಪ್ಪ

Facebook
Twitter
Telegram
WhatsApp

ಚಿತ್ರದುರ್ಗ, (ಅ.08): ರಾಜಕೀಯ ಜೀವನದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದ ಜನರ ಹಾಗೂ ಸಮಾಜದ, ಮಣ್ಣಿನ ಋಣ ತೀರಿಸಲು ಸಾಧ್ಯ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ಚಿಕ್ಕಜಾಜೂರಿನಲ್ಲಿ ಮೂರು ಕೋಟಿ ಹನ್ನೊಂದು ಲಕ್ಷ ರೂ.ವೆಚ್ಚದಲ್ಲಿ ಜಲಜೀವನ್ ಯೋಜನೆಯಡಿ ಪ್ರತಿ ಮನೆ ಮನೆಗೂ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಆರುವರೆ ಕೋಟಿ ಜನಸಂಖ್ಯೆಗೆ 224 ಶಾಸಕರುಗಳಿದ್ದಾರೆ. ಹಾಗಾಗಿ ಜವಾಬ್ದಾರಿಯನ್ನು ತಿಳಿದು ಕೆಲಸ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸಮಸ್ಯೆಯನ್ನು ನೀಗಿಸಿದ್ದೇನೆ. 28 ವರ್ಷಗಳ ಹಿಂದೆ ಭರಮಸಾಗರ ಕ್ಷೇತ್ರದಿಂದ ಬಾಣದ ಗುರುತಿಗೆ ಸ್ಪರ್ಧಿಸಿ ಗೆದ್ದು ಅಲ್ಲಿಂದ ಇಲ್ಲಿಯತನಕ ರಾಜಕೀಯದಲ್ಲಿ ನಿಮ್ಮ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಆಗ ಭರಮಸಾಗರ, ದಾವಣಗೆರೆ, ಚಿತ್ರದುರ್ಗ ಸೇರಿ 491 ಹಳ್ಳಿಗಳಿದ್ದವು. ಅದರಲ್ಲಿ 386 ಹಳ್ಳಿಗಳಲ್ಲಿ ಮಣ್ಣಿನ  ರಸ್ತೆಗಳಿದ್ದವು. ಎಲ್ಲವನ್ನು ಟಾರ್ ರಸ್ತೆಯನ್ನಾಗಿ ಮಾಡಿದ್ದೇನೆ. ಅದರ ಪರಿಣಾಮ ಎರಡನೆ ಬಾರಿಗೆ ನಿಂತಾಗ ಯುವಕರು ನನ್ನನ್ನು ಹೆಗಲ ಮೇಲೆ ಹೊತ್ತು ಕುಣಿಸಿ ಹದಿನೆಂಟುವರೆ ಸಾವಿರ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿ ಎರಡನೆ ಬಾರಿಗೆ ಗೆಲ್ಲುವುದಿಲ್ಲ ಎನ್ನುವ ತಪ್ಪು ಕಲ್ಪನೆಯನ್ನು ಸುಳ್ಳಾಗಿಸಿ ರಸ್ತೆ ರಾಜ ಎಂಬ ಬಿರುದು ನೀಡಿದರು ಎನ್ನುವುದನ್ನು ಸ್ಮರಿಸಿಕೊಂಡರು.

ಚಿಕ್ಕಜಾಜೂರಿನಿಂದ ಚಿಕ್ಕಎಮ್ಮಿಗನೂರಿಗೆ 30 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿಗೆ ಪೈಪ್‍ಲೈನ್ ಆಗಿದೆ. ನಬಾರ್ಡ್‍ನಿಂದ 370 ಕೋಟಿ ರೂ.ಮಂಜೂರಾಗಿದೆ. ತೋಟಗಳನ್ನು ಉಳಿಸಿಕೊಳ್ಳಲು ರೈತರು ತಮ್ಮ ಮನೆಯಲ್ಲಿದ್ದ ಬಂಗಾರವನ್ನು ಮಾರಿದರೆ ಇನ್ನು ಕೆಲವರು ಟ್ಯಾಂಕರ್‍ಗಳಿಂದ ನೀರು ತಂದು ತೋಟಗಳನ್ನು ರಕ್ಷಣೆ ಮಾಡಿಕೊಂಡಿದ್ದನ್ನು ನೋಡಿ ಕಳೆದ ನಾಲ್ಕು ವರ್ಷದಲ್ಲಿ 300 ಕ್ಕೂ ಹೆಚ್ಚು ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದರಿಂದ ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ. ಹಿರಿಯೂರಿನ ವಿ.ವಿ.ಸಾಗರದಿಂದ ಪೈಪ್‍ಲೈನ್ ಬರುತ್ತಿದ್ದು, ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ 493 ಹಳ್ಳಿಗಳಿಗೆ ನೀರು ಪೂರೈಸಲಾಗುವುದು. ಇದಕ್ಕಾಗಿ 370 ಕೋಟಿ ರೂ.ಗಳನ್ನು ನೀಡಿದ್ದು, ಹೆಚ್ಚುವರಿಯಾಗಿ ಮತ್ತೆ ನೂರು ಕೋಟಿ ರೂ.ಗಳನ್ನು ಕೊಡುವುದಾಗಿ ತಿಳಿಸಿದರು.
ಜೋಗ್‍ಫಾಲ್ಸ್‍ನಿಂದ ನೇರವಾಗಿ 270 ಮೆ.ಗಾ.ವ್ಯಾಟ್ ವಿದ್ಯುತ್ ತರಿಸಿಕೊಂಡು ಕರೆಂಟ್ ಸಮಸ್ಯೆಯಿಲ್ಲದಂತೆ ನೋಡಿಕೊಳ್ಳುತ್ತೇನೆ. ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ರಸ್ತೆಗೆ ಹದಿಮೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇಡಿ ಹೊಳಲ್ಕೆರೆ ತಾಲ್ಲೂಕಿನ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆ ಕಟ್ಟಿಸಲು ಹತ್ತು ಕೋಟಿ ರೂ.ಗಳನ್ನು ನೀಡಿದ್ದೇನೆ. ಇನ್ನು ಒಂದು ತಿಂಗಳಲ್ಲಿ ಗುದ್ದಲಿ ಪೂಜೆ ನಡೆಯಲಿದೆ. ಅಧಿಕಾರ ಶಾಶ್ವತವಲ್ಲ. ಇರುವತನಕ ಮತದಾರರಿಗೆ ಅನುಕೂಲ ಮಾಡಬೇಕೆಂಬುದು ನನ್ನ ಆಸೆ. ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದ ಬಡವರಿಗೆ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಒಂದುವರೆ ಕೋಟಿ ರೂ.ಗಳನ್ನು ಕೊಟ್ಟಿದ್ದೇನೆ. ಹಗಲು-ರಾತ್ರಿ ಶ್ರಮ ವಹಿಸಿ ಕ್ಷೇತ್ರದ ಮತದಾರರ ಒಳಿತಿಗೆ ಸಿದ್ದ ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಶ್ಮಿಪ್ರದೀಪ್, ಉಪಾಧ್ಯಕ್ಷ ಪಿ.ಎಸ್.ಮೂರ್ತಿ, ಪುಟ್ಟಣ್ಣ, ರಾಜಣ್ಣ, ಶ್ರೀಕಾಂತ್, ಯೋಗಣ್ಣ, ಗಂಗಣ್ಣ, ಶ್ರೀಮತಿ ವನಜಾಮೀನಾಕ್ಷಿ, ಡಿ.ಸಿ.ಮೋಹನ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಈ ಸಂದರ್ಭದಲ್ಲಿದ್ದರು.

 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ರೇಟ್ ಎಷ್ಟು ?

    ಸುದ್ದಿಒನ್, ಚಿತ್ರದುರ್ಗ, ನವಂಬರ್. 25 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ ಉತ್ಪನ್ನಗಳ (ಸರಕು) ಇಂದಿನ               (

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

ಚಿತ್ರದುರ್ಗ | ಜಿ.ಆರ್. ಹಳ್ಳಿ ಬಳಿ ಕಾರಿಗೆ ಕಾರು ಡಿಕ್ಕಿ : 8 ಮಂದಿಗೆ ಗಾಯ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ರಾಷ್ಟ್ರೀಯ ಹೆದ್ದಾರಿ 13ರ ಗುಡ್ಡದ ರಂಗವ್ವನಹಳ್ಳಿ ಸಮೀಪದ CNG ಪೆಟ್ರೋಲ್ ಬಂಕ್ ಬಳಿ ನಿನ್ನೆ ರಾತ್ರಿ (ಭಾನುವಾರ) 10 ಗಂಟೆ ಸಮಯದಲ್ಲಿ ಇನೋವಾ ಕಾರು ಹಾಗೂ

error: Content is protected !!