Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ನಾಮಫಲಕಗಳ ಬಳಕೆಗೆ ಸ್ವ ಇಚ್ಛೆಯಿಂದ ಮುಂದಾಗಿ :  ಶಾಸಕ ವೀರೇಂದ್ರ ಪಪ್ಪಿ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ,ಜುಲೈ. 10 :  ಕನ್ನಡ ನಾಮಫಲಕಗಳ ಅಳವಡಿಕೆಯನ್ನು ಕನ್ನಡ ನೆಲದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರು ಸ್ವ ಇಚ್ಛೆಯಿಂದ ಖಡ್ಡಾಯಗೊಳಿಸಿಕೊಂಡು ಪಾಲನೆ ಮಾಡಬೇಕೆಂದು ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಕರೆ ನೀಡಿದರು. 

ನಗರದ ಒನಕೆಓಬವ್ವ ವೃತ್ತದಲ್ಲಿ  ಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ನಾಮಫಲಕಗಳ ಅಳವಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ.  ಪ್ರತಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಸರ್ಕಾರ ಆದೇಶಿಸಿದೆ.  ಜೊತೆಯಲ್ಲಿ ಕನ್ನಡ ನಾಡಿನಲ್ಲಿ ಇರುವಂತಹ ಎಲ್ಲಾ ವರ್ಗದ ಜನತೆ ನಾಮಫಲಕಗಳಲ್ಲಿ ಕನ್ನಡ ಬಳಕೆಯನ್ನು ಸ್ವ ಇಚ್ಛೆಯಿಂದ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.

ಕನ್ನಡದ ಬಗ್ಗೆ ಹೋರಾಟಗಾರರಿಗೂ ತಮಗೂ, ಅಧಿಕಾರಿಗಳಿಗೂ, ಜಿಲ್ಲಾಡಳಿತಕ್ಕೂ ಅಪಾರವಾದ ಜವಾಬ್ದಾರಿ ಇದೆ.  ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.

ಕರ್ನಾಟಕ ಜ್ಯೋತಿ ರಥಯಾತ್ರೆಯ ಕಾರ್ಯಕ್ರಮವನ್ನು ನಗರದಲ್ಲಿ ಅಧಿಕಾರಿಗಳು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದಾರೆಂದು ಇದೇ ಸಂದರ್ಭದಲ್ಲಿ ಶಾಸಕರು ಪ್ರಶಂಸೆ ವ್ಯಕ್ತಿಪಡಿಸಿದರು.

ಕನ್ನಡ ಪರ ಹೋರಾಟಗಾರ ಶಿವಕುಮಾರ್ ಮಾತನಾಡಿ. ಕನ್ನಡ ನಾಮಫಲಕಗಳ ಅಳವಡಿಕೆಗೆ ಆಗ್ರಹಿಸಿ ಮಾಡಲಾದ ಹೋರಾಟದ ಸಂದರ್ಭದಲ್ಲಿ ನಮ್ಮ ಮೇಲೂ, ಕನ್ನಡ ಪರ ಹೋರಾಟಗಾರರ ಮೇಲೂ ಪೊಲೀಸ್ ಪ್ರಕರಣಗಳು ದಾಖಲಾಗಿವೆ.  ಇದ್ಯಾವುದಕ್ಕೂ ಜಗ್ಗದೇ ಕನ್ನಡ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್, ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿದಂತೆ ಹಲವಾರು ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಮಾಜಿಕ ನ್ಯಾಯದ ವಿರೋಧಿಗಳು ಸಂವಿಧಾನ ಬದಲಾಯಿಸುವ ಮಾತಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 26 : ಸಂವಿಧಾನ ನೀಡಿರುವ ಹಕ್ಕುಗಳನ್ನು ಚಲಾಯಿಸುವ ಜೊತೆಗೆ , ಭಾದ್ಯತೆಗಳನ್ನು ತಪ್ಪದೇ ಪಾಲಿಸುವುದೂ ಆವಶ್ಯಕ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾರತ ಸಂವಿಧಾನ ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ : ಟಿ.ಪಿ.ಉಮೇಶ್

ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 26  : ಭಾರತ ದೇಶದ ಸಂವಿಧಾನ ಪ್ರಪಂಚದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಭಾರತದಂತ ಬೃಹತ್ ವಿಸ್ತಾರವುಳ್ಳ ಹತ್ತಾರು ಧರ್ಮ, ಸಾವಿರಾರು ಜಾತಿ, ಭಾಷೆ, ಸಂಸ್ಕೃತಿ ಆಚರಣೆಗಳುಳ್ಳ ಜನರನ್ನು ಒಗ್ಗೂಡಿಸಿಕೊಂಡು

ಇಂದು ಸಂವಿಧಾನ ದಿನಾಚರಣೆ | ಕಾರಣ ಮತ್ತು ಮಹತ್ವವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ರಾಷ್ಟ್ರೀಯ ಸಂವಿಧಾನ ದಿನ 2024 : ಬ್ರಿಟಿಷರ ಆಳ್ವಿಕೆಯಲ್ಲಿ ಸುಮಾರು 200 ವರ್ಷಗಳ ಕಾಲ ಲೂಟಿ ಮತ್ತು ಅಸ್ತವ್ಯಸ್ತಗೊಂಡಿದ್ದ ಭಾರತವನ್ನು ಸ್ವಾತಂತ್ರ್ಯದ ನಂತರ ಒಂದುಗೂಡಿಸುವಲ್ಲಿ ನಮ್ಮ ಸಂವಿಧಾನವು ಪ್ರಮುಖ ಪಾತ್ರ ವಹಿಸಿದೆ.

error: Content is protected !!