Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉದ್ಯೋಗಿಗಳ ಸುರಕ್ಷತೆಗೆ ಒತ್ತು ನೀಡಿದ ವೇದಾಂತ ಐರನ್ ಓರ್ : ಚಿತ್ರದುರ್ಗದಲ್ಲಿ 2ನೇ ಸ್ಲೋಪ್ ಸ್ಟೆಬಿಲಿಟಿ ರೆಡಾರ್ ಅಳವಡಿಕೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ : ಕಾರ್ಯಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆಯನ್ನು ಸತತವಾಗಿ ಹೆಚ್ಚಿಸುವ ನಮ್ಮ ವಿನ್ಯಾಸದ ಭಾಗವಾಗಿ ಎರಡನೇ ಸ್ಲೋಪ್ ಸ್ಟೆಬಿಲಿಟಿ ರೆಡಾರ್(ಎಸ್‍ಎಸ್‍ಆರ್) ಅನ್ನು ಅಳವಡಿಸಲಾಗಿದೆ. ಜೊತೆಗೆ ನಮ್ಮ ಕಾರ್ಯಾಚರಣೆಗಳಲ್ಲಿನ ಕೇಂದ್ರವಾದ ನಮ್ಮ ಕಾರ್ಯಪಡೆಯ ಯೋಗಕ್ಷೇಮವನ್ನು ಇದು ನೋಡಿಕೊಳ್ಳುತ್ತದೆ. ನಮ್ಮ ಕಾರ್ಯಾಚರಣೆಗಳಲ್ಲಿ ಸುಸ್ಥಿರತೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಕೂಡ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದು

ವೇದಾಂತ ಸೇಸ ಗೋವಾದ ಗಣಿಗಳ ಮುಖ್ಯ ಕಾರ್ಯಾಚರಣೆ ಅಧಿಕಾರಿ ವಿನೋದ್ ಕುಮಾರ್ ಹೇಳಿದರು.

ವೇದಾಂತ ಐರನ್ ಓರ್ ಕರ್ನಾಟಕ(ಐಒಕೆ) ಸಂಸ್ಥೆಯು ಚಿತ್ರದುರ್ಗದ ತನ್ನ ಗಣಿಗಾರಿಕೆ ಸಂಕೀರ್ಣದಲ್ಲಿ 2ನೇ ಸ್ಲೋಪ್ ಸ್ಟೆಬಿಲಿಟಿ ರೆಡಾರ್(ಎಸ್‍ಎಸ್‍ಆರ್) ಅನ್ನು ಇದೇ ಮೇ 10 ರಂದು ಅಳವಡಿಸಲಾಯಿತು.

ಸಂಸ್ಥೆಗೆ ಮೈಲುಗಲ್ಲಾದಂತಹ ಈ ಕಾರ್ಯಕ್ರಮ ತನ್ನ ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ತಾಂತ್ರಿಕ ಉನ್ನತೀಕರಣಕ್ಕೆ ಆದ್ಯತೆ ನೀಡುವ ವೇದಾಂತ ಐಒಕೆಯ ಬದ್ಧತೆಯನ್ನು ಬಿಂಬಿಸುತ್ತದೆ. ಗಣಿಗಳಲ್ಲಿನ ಇಳಿಜಾರುಗಳಲ್ಲಿ ಯಾವುದೇ ಅಸ್ಥಿರತೆಯನ್ನು ತಕ್ಷಣ ಗುರುತಿಸುವ ಅತ್ಯಾಧುನಿಕ ತಂತ್ರಜ್ಞಾನ ಎಸ್‍ಎಸ್‍ಆರ್ ಆಗಿದೆ. ಇದರೊಂದಿಗೆ ಕಾರ್ಯಪಡೆ ಮತ್ತು ಮೂಲಸೌಕರ್ಯದ ಕ್ಷೇಮವನ್ನು ಕಾಯುವ ಖಾತ್ರಿ ಮಾಡಿಕೊಳ್ಳುವುದರೊಂದಿಗೆ ಅಪಾಯಗಳನ್ನು ಇದು ನಿವಾರಿಸುತ್ತದೆ. ಎಸ್‍ಎಸ್‍ಆರ್ ದೂರದಿಂದಲೇ ಕಲ್ಲಿನ ಇಳಿಜಾರುಗಳನ್ನು ಸ್ಕ್ಯಾನ್ ಮಾಡಿ ಇಳಿಜಾರುಗಳಲ್ಲಿನ ಚಲನೆಯನ್ನು ಸತತವಾಗಿ ಅಳೆದು ಗೋಡೆಗಳಲ್ಲಿನ ಚಲನೆಯನ್ನು ಮಿಲಿಮೀಟರ್‍ಗೂ ಕಡಿಮೆಯ ನಿಖರತೆಯೊಂದಿಗೆ ಗಮನಿಸಿ ಬಳಕೆದಾರರನ್ನು ಎಚ್ಚರಿಸುತ್ತದೆ ಎಂದು ಹೇಳಿದರು.

ಗಣಿಗಾರಿಕೆ ಉದ್ಯಮದ ಚಲನಶೀಲ ಕ್ಷೇತ್ರದಲ್ಲಿ ನಾವು ಸಾಗುತ್ತಿರುವಾಗ ಅಪಾಯಗಳನ್ನು ನಿವಾರಿಸಲು ಮತ್ತು ನಮ್ಮ ಪ್ರದರ್ಶನವನ್ನು ಗರಿಷ್ಟಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದು ಕಡ್ಡಾಯವಾಗಿರುತ್ತದೆ. ಸುರಕ್ಷತೆ, ನವೀನತೆ ಮತ್ತು ಸುಸ್ಥಿರತೆಗಳಿಗೆ ನಮ್ಮ ಬದ್ಧತೆಯನ್ನು ಈ ಉಪಕ್ರಮ ಪುನರ್‍ದೃಢೀಕರಿಸುತ್ತದೆ. ನಾವು ಒಂದಾಗಿ ಉತ್ಕøಷ್ಟತೆಗಾಗಿ ಶ್ರಮಿಸುವೆವು ಅಲ್ಲದೆ, ಕೈಗಾರಿಕೆಯಲ್ಲಿ ನೂತನ ಮಾನದಂಡಗಳನ್ನು ಸ್ಥಾಪಿಸಿ ಜೊತೆಗೆ ನಮ್ಮ ಸಮುದಾಯಗಳು ಮತ್ತು ಪರಿಸರಕ್ಕಾಗಿ ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡುವೆವು’’ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಸೆಸಾ ಗೋವಾದ ಗಣಿಗಾರಿಕೆ ವಿಭಾಗದ ಉಪ ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತು ವೇದಾಂತ ಐಒಕೆನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಶೈಲ ಗೌಡ ಅವರು ಸ್ಲೋಪ್ ಸ್ಟೆಬಿಲಿಟಿ ರೆಡಾರ್‍ನ ಅನುಷ್ಠಾನ ಕುರಿತು ತಮ್ಮ ಉತ್ಸಾಹವನ್ನು ಅಭಿವ್ಯಕ್ತಿಸಿ ಮಾತನಾಡಿ, ಐಒಕೆನಲ್ಲಿ ಸುರಕ್ಷತೆ ಅತ್ಯಂತ ಉನ್ನತ ಪ್ರಾಮುಖ್ಯತೆ ಹೊಂದಿದೆ. ಸಂಸ್ಥೆಯ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಲ್ಲಿ ಸ್ಲೋಪ್ ಸ್ಟೆಬಿಲಿಟಿ ರೆಡಾರ್ ಪ್ರಮುಖ ಪಾತ್ರವಹಿಸಲಿದೆ. ಗಣಿಗಾರಿಕೆ ಪ್ರದೇಶದ ಇಳಿಜಾರುಗಳಲ್ಲಿನ ಸ್ಥಿರತೆಯನ್ನು ಸತತವಾಗಿ ಗಮನಿಸಲು ಉನ್ನತ ರೆಡಾರ್ ತಂತ್ರಜ್ಞಾನವನ್ನು ಎಸ್‍ಎಸ್‍ಆರ್ ಬಳಸುತ್ತದೆ. ಈ ಇಳಿಜಾರುಗಳಲ್ಲಿನ ಸಂಭಾವ್ಯ ಚಲನೆಗಳ ಬಗ್ಗೆ ನಿಖರವಾದ ದತ್ತಾಂಶಗಳನ್ನು ನೀಡಿ ಶೀಘ್ರ ಎಚ್ಚರಿಕೆಗಳನ್ನು ಪೂರೈಸುತ್ತದೆ. ಇದರೊಂದಿಗೆ ಅಪಘಾತಗಳನ್ನು ತಪ್ಪಿಸಲು ಮತ್ತು ಕಾರ್ಯಾಚರಣೆಯಲ್ಲಿ ಅಡೆತಡೆಯನ್ನು ತಪ್ಪಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಎಸ್‍ಎಸ್‍ಆರ್ ನಮ್ಮನ್ನು ಸಬಲೀಕರಿಸುತ್ತದೆ’’ ಎಂದರು.

ಗಣಿಗಾರಿಕೆ ಕೈಗಾರಿಕೆಯಲ್ಲಿ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿರುವ ವೇದಾಂತ ಐರನ್ ಓರ್ ಕರ್ನಾಟಕ ಸುಸ್ಥಿರ ಮತ್ತು ಜವಾಬ್ಧಾರಿಯುತ ಗಣಿಗಾರಿಕೆ ಕಾರ್ಯಾಚರಣೆಯ ಖಾತ್ರಿ ಮಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಹೊಂದಿರುತ್ತದೆ. ಸ್ಲೋಪ್ ಸ್ಟೆಬಿಲಿಟಿ ರೆಡಾರ್‍ನ ಉದ್ಘಾಟನೆ ಈ ಬದ್ಧತೆಗೆ ಸಾಕ್ಷಿಯಾಗಿದೆ. ಅಲ್ಲದೆ, ಗಣಿ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ವೇದಾಂತ ಸಂಸ್ಥೆಯ ನಾಯಕತ್ವದ ಸ್ಥಾನವನ್ನು ಇದು ಪುನರ್ ದೃಢೀಕರಿಸುತ್ತದೆ ಎಂದು ಅವರು ಹೇಳಿದರು.

ಈ ಸಮಾರಂಭದಲ್ಲಿ ಐಒಕೆಯ ಕಾರ್ಯಕಾರಿ ಸಮಿತಿ ಸದಸ್ಯರು ಜೊತೆಗೆ ಉದ್ಯೋಗಿಗಳು ಮತ್ತು ಕಾರ್ಮಿಕರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!