ಚಾಮರಾಜನಗರ: ಹೈಕೋರ್ಟ್ ನ ಆದೇಶದ ನಡುವೆಯೂ ಸಾಕಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ. ಇದಕ್ಕೆ ಶಾಲಾ-ಕಾಲೇಜು ಆಡಳಿತ ಮಂಡಳಿ ವಿರೋಧಿಸಿದರು, ನಮಗೆ ಹಿಜಾಬ್ ಮುಖ್ಯ ಎಂದೇ ವಾದಿಸುತ್ತಿದ್ದಾರೆ. ಈ ನಡುವೆ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಲು ಅವಕಾಶ ನೀಡಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಾಲೆಗೆ ಹಿಜಾಬ್ ಧರಿಸಿ ಬರಲು ಅವಕಾಶವಿಲ್ಲ. ಹೈಕೋರ್ಟ್ ಸೂನೆ ನೀಡಿದೆ. ವಿದ್ಯಾರ್ಥಿಗಳು ಹೈಕೋರ್ಟ್ ಸೂಚನೆಗೆ ಗೌರವ ನೀಡಬೇಕು. ಶಾಲೆಗೆ ಸಮವಸ್ತ್ರ ಕಡ್ಡಾಯವಿಲ್ಲ ಸರಿ, ಹಾಗಂತ ಹಿಜಾಬ್ ಧರಿಸು ಬರೋದಕ್ಕೂ ಅವಕಾಶವಿಲ್ಲ ಎಂದಿದ್ದಾರೆ.
ಶಾಲಾ ಕಾಲೇಜುಗಳಿಗೆ ಹೊರಗಿನವರು ಬಾರದಂತೆ ನೋಡಿಕೊಲ್ಳಲುವುದು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಜವಬ್ದಾರಿ. ಕಾನೂನು ಉಲ್ಲಂಘಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಾಳೆಯಿಂದ ಪದವಿ ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಯಾರು ಯಾರನ್ನು ಟೀಕೆ ಮಾಡಿ ಗೊಂದಲ ನಿರ್ಮಾಣ ಮಾಡೋದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.