ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜ.23) : ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ಅದರನ್ವಯ ಶಿಕ್ಷಕರು ಕೌನ್ಸಿಲಿಂಗ್ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ವೇಳಾಪಟ್ಟಿಯನ್ವಯ ಜನವರಿ 24 ರಂದು ಪ್ರಾಥಮಿಕ ಶಾಲಾ ವೃಂದದ ಶಿಕ್ಷಕರ ತಾಲ್ಲೂಕು ಹಂತದ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯನ್ನು, ಜಿಲ್ಲೆಯ 06 ತಾಲ್ಲೂಕಿನ ಹೆಚ್ಚುವರಿ ಶಿಕ್ಷಕರ ಕ್ರೋಢೀಕೃತ ಆದ್ಯತಾ ಪಟ್ಟಿಯಂತೆ ನಡೆಸಲಾಗುವುದು.
ಜನವರಿ 25 ರಂದು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ, ಕ್ರೋಢೀಕೃತ ಆದ್ಯತಾ ಪಟ್ಟಿಯಂತೆ ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್.ಎಸ್.ಎ. ಸಭಾಂಗಣದಲ್ಲಿ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ.
ಜನವರಿ 24 ರಂದು ಬೆಳಿಗ್ಗೆ 10.30 ರಿಂದ ಹೆಚ್ಚುವರಿ (ಪ್ರಾಥಮಿಕ ಶಾಲಾ ವೃಂದ) ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು.
ಜನವರಿ 25 ರಂದು ಬೆ. 10.30 ರಿಂದ ಹೆಚ್ಚುವರಿ (ಪ್ರೌಢಶಾಲಾ ವೃಂದ) ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು, ಟಿ.ಜಿ.ಟಿ. ಶಿಕ್ಷಕರು ಮತ್ತು ಪದವಿಧರ ಮುಖ್ಯ ಶಿಕ್ಷಕರು ನಿಗದಿತ ಸ್ಥಳದಲ್ಲಿ ಕೌನ್ಸಿಲಿಂಗ್ಗೆ ಹಾಜರಾಗಬೇಕು.
ಇದಕ್ಕೆ ಸಂಬಂಧಿಸಿದಂತೆ ಜನವರಿ 24 ರಂದು ಬೆಳಗ್ಗೆ. 09 ಗಂಟೆಗೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯನ್ನು ಚಿತ್ರದುರ್ಗ ಡಿಡಿಪಿಐ ಅವರ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಿಷಯ ನಿರ್ವಾಹಕರೊಂದಿಗೆ ಖುದ್ದು ಹಾಜರಿರಬೇಕು ಎಂದು ಡಿಡಿಪಿಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.