Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿವಾದದ ನಡುವೆಯೂ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ

Facebook
Twitter
Telegram
WhatsApp

ಹುಬ್ಬಳ್ಳಿ: ಈದ್ಗಾ ಮೈದಾನ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದೆ. ಈ ವರ್ಷ ಗಣೇಶ ಚತುರ್ಥಿಯನ್ನು ಈದ್ಗಾ ಮೈದಾನದಲ್ಲಿ ಮಾಡಿಯೇ ತೀರುತ್ತೀವಿ ಎಂದು ಹಿಂದೂ ಪರ ಸಂಘಟನೆಗಳು ಹಠ ತೊಟ್ಟಂತೆ ಆಚರಣೆ ಮಾಡಿದ್ದವು. ಇದೀಗ ಹಲವು ವಿವಾದದ ನಡುವೆ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ.

AIMIM ಜಿಲ್ಲಾ ಕಾರ್ಯದರ್ಶಿ ವಿಜಯ್ ನೇತೃತ್ವದಲ್ಲಿ ಇಂದು ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಟಿಪ್ಪು ಭಾವಚಿತ್ರವನ್ನು ಇಟ್ಟು, ಅದಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಜೊತೆಗೆ ಟಿಪ್ಪು ಬಗ್ಗೆ ಘೋಷಣೆಯನ್ನು ಕೂಗಿದ್ದಾರೆ. ಸಮತಾ ಸೈನಿಕ ಸಂಘಟನೆಯಿಂದಲು ಟಿಪ್ಪು ಜಯಂತಿ ಆಚರಣೆಗೆ ಬೆಂಬಲ ವ್ಯಕ್ತವಾಗಿದೆ.

ಕಾರ್ಯಕ್ರಮದ ನಡುವಲ್ಲಿ ಮಾತನಾಡಿದ ವಿಜಯ್, ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಮಾಡಲು ಅನುಮತಿ ಕೊಟ್ಟಾಗ ನಾವೂ ಸುಮ್ಮನಿದ್ದೆವು. ಆದ್ರೆ ಟಿಪ್ಪು ಜಯಂತಿಗೆ ಅನುಮತಿ ಕೊಟ್ಟಾಗ ಯಾಕೆ ವಿರೋಧ ಮಾಡುತ್ತಾರೆ. ಪ್ರಮೋದ್ ಮುತಾಲಿಕ್ ಓರ್ವ ಮತಾಂಧ. ಜಯಂತಿ ಆಚರಣೆ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಟಿಪ್ಪು ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದರ್ಶನ್ ಗೆ ಷರತ್ತು ಬದ್ಧ ಜಾಮೀನು : ದಾಸನ ಪರ ವಕೀಲರು ಹೇಳಿದ್ದೇನು..?

ಬೆಂಗಳೂರು: ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಿಸಿದ್ದ ಕಾರಣ ಹೈಕೋರ್ಟ್ ಜಾಮೀನು ನೀಡಿದೆ. ಮದ್ಯಂತರ ಜಾಮೀನಿನಲ್ಲಿ ವೈದ್ಯಕೀಯ ಚಿಕಿತ್ಸೆಗೆಂದೆ ಈ ಆರು ವಾರಗಳನ್ನು ಮೀಸಲಿಡಬೇಕೆಂದು ತಿಳಿಸಿದೆ. ಈಗ ದರ್ಶನ್ ಪರ ವಕೀಲರಿಗೆ

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 30: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ(ಅಕ್ಟೋಬರ್. 30 ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ

ಕಾನೂನು ರೀತಿಯಲ್ಲಿ ರಸ್ತೆ ಆಗಲಿಕರಣ ಆಗಲಿ : ಕಟ್ಟಡ ಮಾಲೀಕರ ಒತ್ತಾಯ

ಸುದ್ದಿಒನ್, ಚಿತ್ರದುರ್ಗ ಅ. 30 : ಕಾನೂನು ರೀತಿಯಲ್ಲಿ ರಸ್ತೆ ಆಗಲಿಕರಣ ಆಗಲಿ ಆದೇ ರೀತಿ ನಮಗೆ ಸಿಗಬೇಕಾದ ಪರಿಹಾರವನ್ನು ಕಾನೂನು ರೀತಿಯಲ್ಲಿ ನೀಡಬೇಕು ಎಂದು ಸರ್ಕಾರ ಮತ್ತು ಸಚಿವರನ್ನು ರಸ್ತೆ ಆಗಲೀಕರಣಕ್ಕೆ ಒಳಗಾದ

error: Content is protected !!