Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಲ ಇರುವ ಜಮೀನು ನೀಡಿ ಜ್ಯೂ.ಎನ್ಟಿಆರ್ ಗೆ ಮೋಸ ಮಾಡಿದ ಯುವತಿ ವಿರುದ್ಧ ನಟ ದೂರು..!

Facebook
Twitter
Telegram
WhatsApp

ಜ್ಯೂ. NTR ಆಸ್ತಿಯೊಂದನ್ನು ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಇದೀಗ ಮೋಸ ಮಾಡಿದ ಯುವತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಆಸ್ತಿ ಮೇಲೆ ಕೋಟ್ಯಾಂತರ ರೂಪಾಯಿ ಸಾಲವಿದ್ದು, ನ್ಯಾಯ ಕೇಳುತ್ತಿದ್ದಾರೆ.

ಜ್ಯೂ. NTR, ಆರ್ ಆರ್ ಆರ್ ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದವರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡವರು. ಈ ಸಿನಿಮಾದಲ್ಲಿ ಖ್ಯಾತಿ ಪಡೆದ ಮೇಲೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ಪ್ರಾಪರ್ಟಿ ಮೇಲೆ ಹಣ ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಮಾಡುತ್ತಿದ್ದಾರೆ. ಆದ್ರೆ 2003ರಲ್ಲಿ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಒಂದು ಸೈಟ್ ಖರೀದಿ ಮಾಡಿದ್ದರು. ಆ ಸೈಟ ವಿಚಾರಕ್ಕೆ ಈಗ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂಕು ಗೀತಾ ಎಂಬುವವರಿಂದ 680 ಚದುರ ಗಜ ಭೂಮಿ ಖರೀದಿಸಿದ್ದರು. ಆದರೆ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಲವು ಬ್ಯಾಂಕ್ ಗಳು ಮುಂದಾಗಿವೆ. ಆ ಮಹಿಳೆ ನಕಲಿ ದಾಖಲೆಯನ್ನು ನೀಡಿ, ಜ್ಯೂ. ಎನ್ ಟಿ ಆರ್ ಗೆ ಭೂಮಿ ಮಾರಾಟ ಮಾಡಿದ್ದಾಳೆ. ಆ ಜಾಗವನ್ನು ಶ್ಯೂರಿಟಿಯಾಗಿಟ್ಟು ಹಲವು ಬ್ಯಾಂಕ್ ಗಳಲ್ಲಿ ಆ ಮಹಿಳೆ ಸಾಲ ಪಡೆದಿದ್ದಾಳೆ. ಸಾಲ ಇತ್ಯರ್ಥವಾಗದ ಕಾರಣ ಸಾಲ ಕೊಟ್ಟ ಬ್ಯಾಂಕ್ ಗಳು ಸಾಲ ವಸುಲಾತಿ ನ್ಯಾಯಮಂಡಳಿ ಮೊರೆ ಹೋಗಿದ್ದವು. ಇದರೊಂದಿಗೆ ನ್ಯಾಯಾಧೀಕರಣವು ಬ್ಯಾಂಕ್ ಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಹಲವು ವರ್ಷಗಳಿಂದ ಈ ವಿವಾದ ಬಗೆ ಹರಿದಿಲ್ಲ. ಹೀಗಾಗಿ ಈ ಕೇಸ್ ಈಗ ಜ್ಯೂ.ಎನ್ಟಿಆರ್ ಗೆ ಸಂಕಷ್ಟ ತಂದೊಡ್ಡಿದ್ದು, ಗೀತಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

INDIA Vs ZIMBABWE : 13 ರನ್‌ಗಳ ಅಂತರದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು

  ಸುದ್ದಿಒನ್ : ಟಿ20 ವಿಶ್ವಕಪ್ ಗೆದ್ದ ಭಾರತ ಆ ಬಳಿಕ ಮೊದಲ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ.  ಜಿಂಬಾಬ್ವೆ ವಿರುದ್ಧ 13 ರನ್‌ಗಳಿಂದ ಸೋತಿತು. ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್

ಹೆಚ್ಡಿಕೆ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ರು..ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನ ಕೊಡಿಸಲಿ ನೋಡೋಣಾ : ಚೆಲುವರಾಯಸ್ವಾಮಿ

ಬೆಂಗಳೂರು: ಮೊನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜನತಾ ದರ್ಶನ ನಡೆಸಿದ್ದರು‌. ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಸರ್ಕಾರದ ಮೇಲೆ ಕಿಡಿಕಾರಿದ್ದರು. ಇದೀಗ ಜನತಾ ದರ್ಶನದ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರು ಆಕ್ರೋಶ

ಚಿತ್ರದುರ್ಗ | ಪಿ.ಸಿ.ಪಿ.ಎನ್.ಡಿ.ಟಿ ಸಲಹಾ ಸಮಿತಿಯ ಅಧ್ಯಕ್ಷರಾಗಿ ಡಾ. ಸೌಮ್ಯ ನೇಮಕ

ಚಿತ್ರದುರ್ಗ. ಜುಲೈ.06:  ಪಿ.ಸಿ.ಪಿ.ಎನ್.ಡಿ.ಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ ವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಅನುಸಾರ ಸಲಹಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಸಲಹಾ ಸಮಿತಿ ಅಧ್ಯಕ್ಷರಾಗಿ ಚಿತ್ರದುರ್ಗದ ಖಾಸಗಿ ನರ್ಸಿಂಗ್

error: Content is protected !!