ಬೆಂಗಳೂರು: ಅಪ್ಪು ಅಗಲಿದ ಬಳಿಕ ಅಂತಿಮ ದರ್ಶನ ಅದೆಷ್ಟೋ ಜನರಿಗೆ ಸಿಗಲೇ ಇಲ್ಲ. ಅವರ ಸಮಾಧಿ ದರ್ಶನ ಮಾಡೋದಕ್ಕೆ ಈಗ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸಾರ್ವಜನಿಕರು ಸಮಾಧಿ ದರ್ಶನ ಭಾಗ್ಯ ನೀಡಿದ್ದು, ಅಪ್ಪು ನೋಡಲು ಅಭಿಮಾನಿಗಳು ಚೆನ್ನೈನಿಂದ ಆಗಮಿಸಿದ್ದರು.
ಅಭಿಮಾನಕ್ಕೆ ಭಾಷೆಯ ಗಡಿಯಿಲ್ಲ ಅನ್ನೋದನ್ನ ತೋರಿಸಿದ್ದಾರೆ. ಕನ್ನಡ ಬಾರದಿದ್ದರೂ ಅಪ್ಪು ಪ್ರೀತಿಸುವ ತಮಿಳು ಕುಟುಂಬಸ್ಥರು, ಬೆಳಗ್ಗೆಯೇ ಕಂಠೀರವ ಸ್ಟುಡಿಯೋ ಆಗಮಿಸಿದ್ದಾರಡ ಚೆನ್ನೈ ಅಭಿಮಾನಿಗಳ ಕುಟುಂಬ.
ಕನ್ನಡ ಬಾರದ ಇವರು ಪುನೀತ್ ಅತಿ ದೊಡ್ಡ ಅಭಿಮಾನಿಗಳು. ಅಪ್ಪು ದರ್ಶನ ಪಡೆಯಲು ಆಗಮಿಸಿದ ತಮಿಳಿನ ರಾಗಿಣಿ ಕುಟುಂಬ, ಅಪ್ಪು ಫೋಟೊಗೆ ಸೆಲ್ಯೂಟ್ ಹೊಡೆದು ಅಂತಿಮ ನಮನ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲ ಅಪ್ಪು ಸಮಾಧಿ ದರ್ಶನಕ್ಕೆ ೧ ತಿಂಗಳ ಮಗುವಿನೊಂದಿಗೆ ತಾಯಿಯೊಬ್ಬರು ಬಂದಿದ್ದಾರೆ. ಆ ತಾಯಿ ಅಪ್ಪು ನೆನೆದು ಭಾವುಕರಾದ ಕ್ಷಣ ಎಲ್ಲರ ಕಣ್ಣು ತೇವ ಮಾಡಿದೆ. ಬೆಂಗಳೂರಿನ ಬಾಣಸವಾಡಿ ಯಿಂದ, ಸಮಾಧಿ ದರ್ಶನಕ್ಕೆ ಬಂದಿದ್ದರು. ಆ ಬಳಿಕಮಾತನಾಡಿದ ಅವರು, ಪುನೀತ್ ನೋಡಿ ನಾವು ನಿರ್ಧಾರ ಮಾಡಿದ್ದೇವೆ. ನಾವು ನೇತ್ರದಾನ, ದೇಹದಾನ ಮಾಡ್ತೇವೆ. ನಮ್ಮ ಮಗು ಅಪ್ಪುವಿನಂತೆ ಆಗ್ಲಿ. ಅವರ ಗುಣ ಸ್ವಭಾವ ಎಲ್ಲ ಬರಲಿ. ಮಗುವಿಗೆ ಅಪ್ಪು ಆಶೀರ್ವಾದ ಇರಲಿ ಅಂತ ಬಂದಿದ್ದೆವೆ ಎಂದರು.