ಸುದ್ದಿಒನ್, ಚಿತ್ರದುರ್ಗ, ಸೆ.29 : ಸಂವಿಧಾನದಲ್ಲಿ ಎಲ್ಲರಿಗೂ ಜೀವಿಸುವ ಹಕ್ಕು ಇದೆ. ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾದ ಜೋಡಿಯನ್ನು ಬಹಿಷ್ಕಾರ ಹಾಕಿರುವುದು ಕಾನೂನುಬಾಹಿರ. ಯಾರು ಕೂಡ ಕಾನೂನು ವಿರುದ್ಧವಾದ ಕೆಲಸವನ್ನು ಮಾಡಬಾರದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಹೇಳಿದರು.
ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹದ ಕಾರಣದಿಂದ ಉದ್ಭವಿಸಿದ ಸಾಮಾಜಿಕ ಬಹಿಷ್ಕಾರ ನಡೆಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
ಮೌಢ್ಯತೆಯು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಯಾವುದೇ ನಾಗರೀಕರೂ ಇಂತಹ ಘಟನೆಗಳಿಗೆ ಬೆಂಬಲಿಸಬಾರದು. ಅದರಲ್ಲೂ ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಬೆಂಬಲಿಸಿದ್ದೇ ಆದಲ್ಲಿ, ಅಂತಹವರ ಸದಸ್ಯತ್ವ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಸಾಂತ್ವನ ಕೇಂದ್ರದಲ್ಲಿರುವ ದಂಪತಿ ಮತ್ತು ಮಗು ಕರೆದುಕೊಂಡು ಬರಲಾಗುವುದು. ಗ್ರಾಮಸ್ಥರು ಸಂತೋಷದಿಂದ ಸ್ವಾಗತಿಸಿ ಗ್ರಾಮಸ್ಥರಲ್ಲಿ ಮನವಿ ಮಾಡಿ ಪ್ರಕರಣ ಸುಖಾಂತ್ಯವಾಗುವಂತೆ ಕ್ರಮವಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೆಹಮಾನ್ ಪಾಷ,ತಾಪಂ ಇ ಒ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ತಳುಕು ವೃತ್ತ ನಿರೀಕ್ಷಕ ಸಮೀವುಲ್ಲಾ, ನಾಯಕನಹಟ್ಟಿ ಪಿ.ಎಸ್.ಐ. ದೇವರಾಜ್ , ಪಿಡಿಒ ಶಶಿಕಲಾ,ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.