Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಕ್ಷಕರ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನ : ಡಿ.ಟಿ.ಶ್ರೀನಿವಾಸ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಜೂ. 17 :   ಸ್ವಾತಂತ್ರ ಬಂದಾಗಿನಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಕಂಡಿರಲಿಲ್ಲ, ಈಗ ಪಕ್ಷದ ಕಾರ್ಯಕರ್ತರು, ಮುಖಂಡರು, ಮತದಾರರು ಕೈ ಹಿಡಿದಿರುವುದರಿಂದ ನನ್ನ ಗೆಲುವು ಕಂಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಗೆ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಮುಖಂಡರು, ಅಭಿಮಾನಿಗಳು ನೀಡಿದ ಸನ್ಮಾನವನ್ನು ಸ್ವೀಕಾರ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಚುನಾವಣೆಯನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ, ನಮ್ಮ ಸರ್ಕಾರ ಮಾಡಿದ ಕಾನೂನುಗಳು ಪರಿಷತ್‍ನಲ್ಲಿ ಪಾಸಾಗಬೇಕು. ಆದರೆ ಈಗ ಪರಿಷತ್‍ನಲ್ಲಿ ನಮ್ಮ ಪಕ್ಷದ ಬಲ ಕಡಿಮೆ ಇದ್ದು ಈ ಚುನಾವಣೆಯಿಂದ ಪರಿಷತ್‍ನಲ್ಲಿ ನಮ್ಮ ಬಲವನ್ನು ಹೆಚ್ಚಳ ಮಾಡುವುದು ಅಗತ್ಯವಾಗಿದೆ.
ಇದರಿಂದ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದರಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾದ್ಯವಾಯಿತೆಂದು ತಿಳಿಸಿದರು.

1952ರಿಂದ ಇಲ್ಲಿಯವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲುವುವನ್ನು ಕಂಡಿರಲಿಲ್ಲ, ನಾನು ಈ ಚುನಾವಣೆಗೆ ನಿಂತಾಗ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರವನ್ನು ಮಾಡುವುದರ ಮೂಲಕ ನನ್ನ ಸೋಲಿಸಲು ಮುಂದಾಗಿದ್ದರು, ಜಾತಿವಾದಿ, ಅಹಿಂದ ಎಂದು ಮತದಾರರಲ್ಲಿ ಗೊಂದಲವನ್ನು ಮೂಡಿಸುವುದರ ಮೂಲಕ ಮತಗಳನ್ನು ಸೆಳೆಯುವ ಕಾರ್ಯವನ್ನು ಮಾಡಿದರು. ಅದರೆ ಮತದಾರರು ಅದಕ್ಕೆ ಮ್ನನಣೆಯನ್ನು ನೀಡದೆ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯವನ್ನು ನೀಡುವ ಪಕ್ಷವಾಗಿದೆ. ಸಣ್ಣ ಸಣ್ಣ ಸಮುದಾಯವನ್ನು ಗುರುತಿಸುವುದರ ಮೂಲಕ ರಾಜಕೀಯ ಸ್ಥಾನವನ್ನು ನೀಡಿದೆ. ಇಲ್ಲಿ ನನ್ನ ಮತ್ತು ನನ್ನ ಹೆಂಡತಿ ಮಧ್ಯೆ ತಂದಿಟ್ಟು ನಮ್ಮನ್ನು ಬೇರೆ ಮಾಡುವುದಕ್ಕೆ ನೋಡಿದರು. ನನಗೆ ಹುಳಿಯನ್ನು ಹಿಂಡಿ ಅಭ್ಯಾಸ ಇಲ್ಲ ಏನೇ ಇದ್ದರೂ ನೇರವಾಗಿ ಹೇಳುವ ಅಭ್ಯಾಸ ನನ್ನದು, ಈ ಕ್ಷೇತ್ರವನ್ನು ಗೆಲ್ಲಬೇಕಾದ ಅನಿವಾರ್ಯತೆ ಇತ್ತು ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರ, ಸಹಾಯದಿಂದ ಗೆಲುವನ್ನು ಸಾಧಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.

ಶಿಕ್ಷಕರ ಕ್ಷೇತ್ರದಿಂದ ನನ್ನನು ಆಯ್ಕೆ ಮಾಡಲಾಗಿದೆ. ಶಿಕ್ಷಕರ ಸಮಸ್ಯೆ ಏನೇ ಇದ್ದರು ಸಹಾ ಅದನ್ನು ಬಗೆಹರಿಸುವ  ಕಾರ್ಯವನ್ನು ಮಾಡಲಾಗುವುದು. ನನ್ನ ಜೊತೆಯಲ್ಲಿ ಪೂರ್ಣಿಮಾ, ಹಾಗೂ ಕೆಡಿಪಿ ಸದಸ್ಯರಾದ ನಾಗರಾಜ್ ರವರು ಜೊತೆಯಲ್ಲಿದ್ದಾರೆ. ಇವರ ಸಹಾಯದಿಂದ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಮಾಡಲಾಗುವುದು. ಶಿಕ್ಷಕರ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಶಿಕ್ಷಕರಿಗೆ ಧಕ್ಕೆಯನ್ನು ತರುವಂತ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಶ್ರೀನಿವಾಸ್ ಭರವಸೆಯನ್ನು ನೀಡಿದರು.

‘ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಗೆಲುವು ಕುತಂತ್ರ, ಕುಂತ್ರದಿಂದ ಬಂದಿದ್ದಲ್ಲ. ಸಂಘಟನೆ, ನೀತಿ-ನಿಯಮ, ಬಹುದಿನದ ಹೋರಾಟ, ಶಿಕ್ಷಕರ ಸಮಸ್ಯೆಗಳಿಗೆ ಉತ್ತರ ಸಿಗುವ ನಿಟ್ಟಿನಲ್ಲಿ ಕೊಟ್ಟಂತಹ ಗೆಲುವು. ಈ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದರು.

ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗದಲ್ಲಿ ಕಳೆದ 30 ವರ್ಷದಿಂದ ಶಾಸಕರಿರಲಿಲ್ಲ, ಇದೇ ರೀತಿ ಕಳೆದ 18 ವರ್ಷದಿಂದ ವಿಧಾನ ಪರಿಷತ್ ಸದಸ್ಯರು ಇರಲಿಲ್ಲ ಈಗ ಮತದಾರರ ಸಹಕಾರ, ಸಹಾಯದಿಂದ ವಿಧಾನ ಸಭೆಯಲ್ಲಿ ನಾನು ಸದಸ್ಯನಾದೆ ಇದೇ ರೀತಿ ಶ್ರೀನಿವಾಸ್ ವಿಧಾನ ಪರಿಷತ್ ಸದಸ್ಯರಾದರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ತರುವುದರ ಮೂಲಕ ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತ ಕಾರ್ಯವನ್ನು ಎಲ್ಲರು ಸೇರಿ ಮಾಡಬೇಕಿದೆ ಇದಲ್ಲದೆ ಕಾರ್ಯಕರ್ತರ ಚುನಾವಣೆಯಾದ ತಾ.ಪಂ. ಹಾಗೂ ಜಿ.ಪಂ, ಚುನಾವಣೆಯನ್ನು ಸಹಾ ಎಲ್ಲರ ಸಹಕಾರದಿಂದ ಗೆಲ್ಲುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕರೆ ನೀಡಿದರು.

ಮಾಜಿ ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಪ್ರಯತ್ನ ಮಾಡುತ್ತೇವೆ. ಕ್ಷೇತ್ರದಲ್ಲಿ ಈ ಹಿಂದೆ ಡಿ.ಸುಧಾಕರ್ ಹಾಗೂ ನಾನು ವೈರಿಗಳಾಗಿರದೆ ಪ್ರತಿಸ್ಪರ್ಧಿ- ಗಳಾಗಿದ್ದೆವು. ಈಗ ಒಂದೇ ಪಕ್ಷದ ಅಡಿಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇವೆ’ ಎಂದರು.

ಡಿಸಿಸಿ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಮಾತನಾಡಿ, ಇಂದು ಸಂಭ್ರಮದ ದಿನವಾಗಿದೆ, ಕಳೆದ ತಿಂಗಳಗಳ ಹಿಂದೆ ವಿಧಾನಸಭೆಗೆ ನಮ್ಮ ಪಕ್ಷದವರನ್ನು ಮತದಾರರು ಆಯ್ಕೆ ಮಾಡಿದರು ಈಗ ವಿಧಾನ ಪರಿಷತ್‍ಗೆ ಕಾಂಗ್ರೆಸ್‍ನ ಅಭ್ಯರ್ಥಿಯ ಕೈಹಿಡಿಯುವುದರ ಮೂಲಕ ಪರಿಷತ್‍ನಲ್ಲಿ ನಮ್ಮ ಪಕ್ಷದ ಸಂಖ್ಯಾ ಬಲವನ್ನು ಹೆಚ್ಚಿಸಿದ್ದಾರೆ.

ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾಗ ಅಂದಿನ ಬಿಜೆಪಿ ಸರ್ಕಾರ ಸ್ಪಂದನೆ ನೀಡಿಲ್ಲ, ಈ ಸಮಯದಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ಶಿವಕುಮಾರ್‍ರವರು ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಈಗ ಸರ್ಕಾರ ಇದೆ ಅವರ ಸಮಸ್ಯೆಯನ್ನು ಪರಿಹಾರ ಮಾಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಜಿ.ಪಂ.ಮಾಜಿ ಸದಸ್ಯ ರಘು, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಶಿವಣ್ಣ, ಲಕ್ಷ್ಮೀಕಾಂತ, ವೆಂಕಟೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಾಲರಾಜ್, ನಗರಾಭೀವೃದ್ದಿ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ, ಮಧುಗೌಡ, ಪ್ರಕಾಶ್ ನಾಯ್ಕ್, ಹನೀಫ್, ಖುದ್ದುಸ್, ಪಾತಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ಶಾಸಕರಾದ ವಿರೇಂದ್ರ ಪಪ್ಪಿ, ವಿಧಾನ ಪರಿಷತ್ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಸಂವಿದಾನ ಶಿಲ್ಪ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಹಾರವನ್ನು ಹಾಕುವುದರ ಮೂಲಕ ನಮನ ಸಲ್ಲಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನವೋದಯ ವಿದ್ಯಾಲಯ: 9 ಮತ್ತು 11 ತರಗತಿ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಚಿತ್ರದುರ್ಗ. ನ.25: ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 2025-26ನೇ ಸಾಲಿಗೆ 9 ಮತ್ತು 11 ತರಗತಿ ತರಗತಿಯ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆಡಳಿತಾತ್ಮಕ

ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಮಹತ್ವದ ಸೂಚನೆ : ಈ ಕೆಲಸಕ್ಕೆ ಹಣ ಕೇಳಿದರೆ ದೂರು ನೀಡಿ

  ಚಿತ್ರದುರ್ಗ. ನ.25: ವಿಫಲವಾದ  ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ

ಮನೆ ಮನೆಗೆ ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಚಾಲನೆ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ಮನೆ ಮನೆಗೂ ಅಡುಗೆ ಅನಿಲ ಪೂರೈಸುವ ಕಾಮಗಾರಿಗೆ ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಸ್ಟೇಡಿಯಂ ಸಮೀಪ ಸೋಮವಾರ ಚಾಲನೆ ನೀಡಿದರು. ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ಭೂಮಿ ಪೂಜೆ

error: Content is protected !!