Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಗನ ಬರ್ತ್ ಡೇ.. ಜೈಲಿಂದ ಜಾಮೀನು ಸಿಕ್ಕ ಖುಷಿ.. ನೇರ ವಿಜಯಲಕ್ಷ್ಮೀ ಮನೆಗೆ ಬಂದ ದರ್ಶನ್..!

Facebook
Twitter
Telegram
WhatsApp

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಐದು ತಿಂಗಳಿನಿಂದ ಜೈಲಿನಲ್ಲೇ ಇದ್ದ ದರ್ಶನ್ ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಇಂದು ಮಗ ವಿನೀಶ್ ಬರ್ತ್ ಡೇ ಕೂಡ. ದೀಪಾವಳಿಯಲ್ಲಿ ದರ್ಶನ್ ಬದುಕಲ್ಲಿ ಹೊಸ ಬೆಳಕು ಮೂಡಿದಂತಾಗಿದೆ. ನಿನ್ನೆ ಸಂಜೆ ಮನೆಗೆ ಹೊರಟ ದರ್ಶನ್ ರಾತ್ರಿ 11.30 ಅಷ್ಡರಲ್ಲಿ ಬೆಂಗಳೂರು ತಲುಪಿದ್ರು. ನಟ ಧನ್ವೀರ್ ಅವರೇ ಕಾರು ಡ್ರೈವ್ ಮಾಡಿಕೊಂಡು ದರ್ಶನ್ ಅವರನ್ನು ಕರೆದುಕೊಂಡು ಬಂದರು. ಬಳ್ಳಾರಿಯಿಂದ ಬರುವಾಗ ಫ್ಯಾನ್ಸ್ ಅಂತು ದರ್ಶನ್ ಇರುವ ಕಾರನ್ನು ಫಾಲೋ ಮಾಡಿಕೊಂಡೆ ಬಂದರು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ರು.

ಮಗ ವಿನೀಶ್ ಅವರ ಹುಟ್ಟುಹಬ್ಬ. ಅಪ್ಪ ಮನೆಗೆ ಬರ್ತಾರೆ ಎಂದು ತಿಳಿದ ಕೂಡಲೇ ವಿನೀಶ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ದರ್ಶನ್ ಆರ್ ಆರ್ ನಗರ ಮನೆಗೆ ಹೋಗುತ್ತಾರೆಂದು ಮನೆಯ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. ಆದರೆ ದರ್ಶನ್ ನೇರವಾಗಿ ತಮ್ಮ ಪತ್ನಿ ವಿಜಯಲಕ್ಷ್ಮೀ ವಾಸವಿದ್ದ ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ ಗೆ ಹೋದರು. ಇಂದು ದರ್ಶನ್ ಟ್ರೀಟ್ಮೆಂಟ್ ಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿದೆ.

ಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಆರು ವಾರಗಳ ನೀಡಿರುವ ಸಮಯವನ್ನು ಸಂಪೂರ್ಣವಾಗಿ ಚಿಕಿತ್ಸೆಗೆಂದು ಬಳಸಿಕೊಳ್ಳಬೇಕು ಎಂದಿದೆ. ಹೀಗಾಗಿ ಇಂದಿನಿಂದ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕಿದೆ. ಈ ಮೊದಲೆಲ್ಲಾ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಲ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆಂಬ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ ಮೈಸೂರಿನಲ್ಲೇ‌ ಚಿಕಿತ್ಸೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ನಾಲ್ವರು ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 28 ಸಾಧಕರನ್ನು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್

ಕೃಷಿ ವಾರ್ತೆ : ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ    

ದಾವಣಗೆರೆ, ಅ.30 : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ. ಮಂಗಳವಾರ(29)

ಚಿತ್ರದುರ್ಗ | 28 ಸಾಧಕರಿಗೆ ಜಿಲ್ಲಾ‌ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಚಿತ್ರದುರ್ಗ ಅ. 31: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 28 ಸಾಧಕರನ್ನು ಜಿಲ್ಲಾ‌ ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. 01 ರಂದು ಬೆ.

error: Content is protected !!