Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೊತೆಜೊತೆಯಾಗಿ ಧರ್ಮಸ್ಥಳಕ್ಕೆ ಬಂದ ಸಿದ್ದು, ಡಿಕೆಶಿ : ಮಂಜುನಾಥನಿಗೆ ಹರಕೆ ತೀರಿಸಿ, ವಿಶೇಷ ಪೂಜೆ ಮಾಡಿಸಿದ ಸಿಎಂ, ಡಿಸಿಎಂ

Facebook
Twitter
Telegram
WhatsApp

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇಬ್ಬರು ಜೊತೆ ಜೊತೆಯಾಗಿಯೇ ಓಡಾಡುವ ಮೂಲಕ ಇಬ್ಬರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾರಿದ್ದಾರೆ. ಸಿಎಂ ಖುರ್ಚಿಗಾಗಿ ಇಬ್ಬರು ಕಿತ್ತಾಡುತ್ತಾರೆ ಎಂಬ ವಿರೋಧ ಪಕ್ಷದ ಮಾತುಗಳಿಗೆ ಈ ನಡೆ ಬಿಸಿ ಮುಟ್ಟಿಸಿದೆ.

ಇಂದು ಮಧ್ಯಾಹ್ನವೇ ಮೈಸೂರಿನ ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಂದ ನೇರವಾಗಿ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಗೆ ಹೋದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬರುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಕುಂಭಮೇಳ, ವಾದ್ಯಘೋಷ್ಠಿಗಳು ಸ್ವಾಗತ ಕೋರಿದವು. ಕ್ಷೇತ್ರದ ಪರವಾಗಿ ಹೆಗ್ಗಡೆ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತ ಕೋರಿದರು. ಹರಕೆಯಂತೆ ಡಿಕೆಶಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಎಂದರೆ ಸಿಎಂ ಹಾಗೂ ಡಿಸಿಎಂ ಸಾಂಪ್ರದಾಯಿಕ ಉಡುಗೆಯಲ್ಲಿ, ಭಕ್ತಿ ಭಾವದಿಂದ ಪೂಜಾ ಕೈಂಕರ್ಯ ನೆರವೇರಿಸಿದರು.

 

ಕಳೆದ ಬಾರಿ ಬಂದಾಗ ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳಕ್ಕೆ ಬಂದಿದ್ದರು ಎಂಬ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಆಹಾರ ಎಂಬುದು ಅವರವರ ವೈಯಕ್ತಿಕ ಆಯ್ಕೆ ಎಂದು ಸಪೋರ್ಟ್ ಮಾಡಿದ್ದರೆ ಇನ್ನು ಕೆಲವರು ದೇವಸ್ಥಾನಕ್ಕೆ ಮಾಂಸ ತಿಂದು ಹೋದರಾ..? ಎಂದು ಸಿಎಂ ವಿರುದ್ಧ ಹೌಹಾರಿದ್ದರು. ಆದರೆ ಈ ಬಾರಿ ಆ ಎಲ್ಲಾ ಕಳಂಕದಿಂದ ಸಿಎಂ ಸಿದ್ದರಾಮಯ್ಯ ದೂರ ದೂರ. ಅಚ್ಚುಕಟ್ಟಾಗಿ ಬೆಳಗ್ಗೆ ಒಂದು ದೋಸೆ ತಿಂದು, ದೇವಸ್ಥಾನದ ಸಂಪ್ರದಾಯದಂತೆ ಪಂಚೆ, ಶಲ್ಯ ತೊಟ್ಟು ದೇವರ ದರ್ಶನ ಪಡೆದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ| ನಿರಾಶ್ರಿತರ ಬಾಳಲ್ಲಿ  ಬೆಳಕಾಗಿರುವ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಪ್ರದೀಪ್

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ತಾಲ್ಲೂಕಿನ ಗೊನೂರುನಲ್ಲಿರುವ ನಿರಾಶ್ರಿತರ  ಪರಿಹಾರ ಕೇಂದ್ರಕ್ಕೆ ಕಾಲಕಾಲಕ್ಕೆ  ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ ಪ್ರದೀಪ್ ಬಿ .ಜಿ, ನೇತ್ರಾಧಿಕಾರಿ  ಕೆ. ಸಿ.ರಾಮು ಹಾಗೂ

ಬಾರೀ ಮಳೆ: ನಾಳೆ ಮತ್ತೆ ಬೆಂಗಳೂರು ಶಾಲೆಗಳಿಗೆ ರಜೆ

  ಬೆಂಗಳೂರು: ಮಳೆರಾಯ ಅದ್ಯಾಕೋ ಏನೋ ಬಿಡುವನ್ನೇ ಕೊಡದಂತೆ ಸುರಿಯುತ್ತಿದ್ದಾನೆ. ಅತ್ತ ಬೆಳೆಯನ್ನ ಕೊಯ್ಲು ಮಾಡುವ ಸಮಯ ಅದು ಆಗ್ತಿಲ್ಲ. ಇತ್ತ ಗಿಡಗಳಿಗೆ ಔಷಧಿ ಹೊಡೆಯುವ ಸಮಯ. ಅದಕ್ಕೂ ಸಮಯ ಸಾಕಾಗುತ್ತಿಲ್ಲ. ಆದರೆ ಮಳೆರಾಯ

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ

error: Content is protected !!