ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.06): ತೂಕ ಮತ್ತು ಗುಣಮಟ್ಟದಲ್ಲಿ ಮೋಸವಾದಾಗ ಪ್ರಶ್ನಿಸುವ ತಿಳುವಳಿಕೆಯನ್ನು ಗ್ರಾಹಕರಲ್ಲಿ ಮೂಡಿಸುವುದೇ ಗ್ರಾಹಕರ ಹಕ್ಕುಗಳ ಸಂಘಟನೆಯ ಮುಖ್ಯ ಉದ್ದೇಶ ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ಡಾ.ಮಂಜುಳ ಸಿ.ತಿಪ್ಪಣ್ಣವರ್ ತಿಳಿಸಿದರು.
ಭೀಮುಸಮುದ್ರ ರಸ್ತೆಯಲ್ಲಿರುವ ದವಳಗಿರಿ ಬಡಾವಣೆಯಲ್ಲಿ ಭಾನುವಾರ ಗ್ರಾಹಕರ ಹಕ್ಕುಗಳ ಸಂಘಟನೆ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಬೆಳಗಿನಿಂದ ಹಿಡಿದು ರಾತ್ರಿ ಮಲುಗುವತನಕ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೀವನೋಪಾಯಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಅದರ ಗುಣಮಟ್ಟ ಹಾಗೂ ತೂಕದಲ್ಲಾಗುವ ವಂಚನೆಯ ಕಡೆ ಗಮನ ಕೊಡುವುದಿಲ್ಲ. ಪ್ಯಾಕ್‍ಗಳ ಮೇಲಿರುವ ಎಂ.ಆರ್.ಪಿ.ಬೆಲೆಗಿಂತ ಅಂಗಡಿಯವರು ಹೆಚ್ಚು ಹಣ ಪಡೆದರು ಪ್ರಶ್ನಿಸುವುದಿಲ್ಲ. ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿಯತನಕ ವಂಚನೆ ಮಾಡುವವರು ಇದ್ದೇ ಇರುತ್ತಾರೆ.
ಹಾಗಾಗಿ ಗ್ರಾಹಕರು ಎಚ್ಚರವಾಗಿದ್ದರೆ ಮಾರಾಟಗಾರರು ಜಾಗೃತರಾಗಿರುತ್ತಾರೆಂದು ಹೇಳಿದರು.
ಗ್ರಾಹಕರ ಹಕ್ಕುಗಳ ಸಂಘಟನೆ ಅತ್ಯಂತ ಪವರ್‍ಫುಲ್. ಸರ್ಕಾರ ಮಾಡದ ಕೆಲಸವನ್ನು ಈ ಸಂಘಟನೆ ಮಾಡುತ್ತದೆ. ಗ್ರಾಹಕ ಪ್ರಜ್ಞಾವಂತನಾಗಿದ್ದರೆ ಮಾರಾಟಗಾರರು ಮೋಸ ಮಾಡಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಗ್ರಾಹಕರಲ್ಲಿ ಮೂಡಬೇಕು. ಗ್ರಾಹಕ ತನ್ನನ್ನು ತಾನು ಮೋಸಕ್ಕೆ ಒಳಪಡಿಸಿಕೊಳ್ಳಬಾರದು. ಕಿರಾಣಿ ಅಂಗಡಿ, ಪೆಟ್ರೋಕ್ ಬಂಕ್, ಹಾಲಿನ ಕೇಂದ್ರ ಹೀಗೆ ಪಟ್ಟಿ ಮಾಡುತ್ತ ಹೋದರೆ ಗ್ರಾಹಕ ಎಲ್ಲೆಲ್ಲಿ ವಸ್ತುಗಳನ್ನು ಖರೀಧಿಸುತ್ತಾನೋ ಅಲ್ಲೆಲ್ಲ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸುವುದಕ್ಕಾಗಿ ನಾವುಗಳು ಸಿದ್ದರಿದ್ದೇವೆ. ಎಂದರು.
ಉಳಿತಾಯ ಗಳಿಕೆಗಿಂತ ಮುಖ್ಯ. ಎಲ್ಲಾ ತಾಲ್ಲೂಕು, ಹಳ್ಳಿಗಳಲ್ಲಿ ನಮ್ಮ ಸಂಘಟನೆಯನ್ನು ವಿಸ್ತರಿಸುತ್ತೇವೆ. ಬರೀ ಮೊಬೈಲ್‍ನಲ್ಲಿಯೇ ಮುಳುಗಿ ಹೋಗುವ ಬದಲು ಎಲ್ಲಿ ಮೋಸ ವಂಚನೆ ನಡೆಯುತ್ತದೆಯೋ ಅಲ್ಲೆಲ್ಲಾ ಎಚ್ಚರಿಕೆಯಿಂದ ಗ್ರಾಹಕ ಇರಬೇಕಾಗುತ್ತದೆ. ಶಾಲಾ-ಕಾಲೇಜು, ಜನನಿಬಿಡ ಸ್ಥಳ, ಮಾರುಕಟ್ಟೆ, ಸಾರ್ವಜನಿಕ ವಲಯಗಳಲ್ಲಿ ವಂಚನೆ ವಿರುದ್ದ ಅರಿವು ಮೂಡಿಸಲಾಗುವುದು. ಐದರಿಂದ ಆರು ವಿಂಗ್‍ಗಳನ್ನು ರಚಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡಲಿದೆ. ಪ್ರಶ್ನಿಸುವ ಗುಣ ಗ್ರಾಹಕರಲ್ಲಿರಬೇಕು ಎಂದು ವಿನಂತಿಸಿದರು.
ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಚಂದ್ರಪ್ಪಘಾಟ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಇಂತಹ ಸಂಘಟನೆ ಅವಶ್ಯಕತೆಯಿದೆ. ಮೊದಲಿನಿಂದಲೂ ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ನಾನು ಸದಾ ಈ ಸಂಘಟನೆಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸ್ಥಳ ಪ್ರಜ್ಞೆ, ಭಾಷಾ ಪ್ರಜ್ಞೆ, ಸಮಯ ಪ್ರಜ್ಞೆಯಿದ್ದಾಗ ಎಂತಹ ಸಮಸ್ಯೆಗಳನ್ನಾದರೂ ಎದುರುಸಿ ನ್ಯಾಯ ಪಡೆಯಬಹುದು. ಅದಕ್ಕಾಗಿ ಗ್ರಾಹಕರು ಈ ಸಂಘಟನೆ ಜೊತೆ ಕೈಜೋಡಿಸುವಂತೆ ವಿನಂತಿಸಿದರು.
ಹೆಚ್.ಆರ್.ಮುರುಗೇಶ್, ಗೋವಿಂದರಾಜು, ಆನಂದ್, ಜಗದೀಶ್ ಟಿ. ಅಜಯ, ಸಂಜೀವಮೂರ್ತಿ, ಗೀತ ವೇದಿಕೆಯಲ್ಲಿದ್ದರು.