ಕಳೆದ ಕೆಲ ದಿನಗಳಿಂದ ಐಎಎಸ್ ಆಫೀಸರ್ ಹಾಗೂ ಐಪಿಎಸ್ ಆಫೀಸರ್ ನಡುವಿನ ಯುದ್ಧ ತಾರಕಕ್ಕೇರಿತ್ತು. ಅದರಲ್ಲೂ ಐಪಿಎಸ್ ಆಫೀಸರ್ ಡಿ ರೂಪಾ ಅವರು ತಮ್ಮೆಲ್ಲಾ ಸಿಟ್ಟು, ಆಕ್ರೋಶವನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕುತ್ತಿದ್ದರು. ಅವರ ಗಂಡ ಮೌನೀಶ್ ಮೌದ್ಗಿಲ್ ಜೊತೆಗೆ ರೋಹಿಣಿ ಮೆಸೇಜ್ ಮಾಡಿದ್ದ ವಿಚಾರವೂ ಆಡಿಯೋ ಮೂಲಕ ವೈರಲ್ ಆಗಿತ್ತು.
ಇದಕ್ಕೆ ಪ್ರತ್ಯುತ್ತರವೆಂಬಂತೆ ರೋಹಿಣಿ ಸಿಂಧೂರಿ ಕೂಡ ಕೋರ್ಟ್ ಮೊರೆ ಹೋಗಿದ್ದರು. ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅವರ ವಿಚಾರಣೆಯನ್ಮು ಕೋರ್ಟ್ ಮಾರ್ಚ್ 7ಕ್ಕೆ ಮುಂದೂಡಿಕೆ ಮಾಡಿದೆ. ಇದಕ್ಕೂ ಡಿ ರೂಪಾ ಅವರು ಹಿತೈಶಿಗಳಿಗೆ ಧನ್ಯವಾದ ಅಂತ ತಿಳಿಸಿದ್ದಾರೆ.
ಇನ್ನು ಈ ಇಬ್ಬರು ಅಧಿಕಾರಿಗಳ ಜಗಳದಿಂದ ಸರ್ಕಾರಕ್ಕೂ ಮುಜುಗರವಾಗಿತ್ತು. ಅದಕ್ಕೆ ರೂಪಾ, ಮೌನೀಶ್, ರೋಹಿಣಿ ಮೂವರನ್ನು ವರ್ಗಾವಣೆ ಕೂಡ ಮಾಡಿತ್ತು. ರೋಹಿಣಿ ಮತ್ತು ರೂಪಾ ಅವರಿಗೆ ಹುದ್ದಯನ್ನು ನಿಗದಿ ಮಾಡದೆ ವರ್ಗಾವಣೆ ಮಾಡಿತ್ತು. ಇದೀಗ ಕೋರ್ಟ್ ಈ ಇಬ್ಬರ ನಡುವೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿಯೇ ಕಿತ್ತಾಡಿಕೊಳ್ಳುತ್ತಿದ್ದ ರೂಪಾ ಮತ್ತು ರೋಹಿಣಿಗೆ ಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ. ಇಬ್ಬರು ಪರಸ್ಪರ ಮಾತನಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಇಬ್ಬರ ಕಾದಾಟಕ್ಕೆ ಮಾತನಾಡಬಾರದು ಎಂದು ಆದೇಶ ಹೊರಡಿಸಿರೋ ಕೋರ್ಟ್ ಜಗಳಕ್ಕೆ ಬ್ರೇಕ್ ಹಾಕಿದೆ.