Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯಕ್ಕೆ ಅಕ್ಕಿ ಪೂರೈಕೆಗೆ ನಿರಾಕರಣೆ : ಚಿತ್ರದುರ್ಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಚಿತ್ರದುರ್ಗ, (ಜೂ.20) : ಹದಿನೆಂಟು ದೇಶಗಳಿಗೆ ಹದಿನೆಂಟು ಲಕ್ಷ ಟನ್ ಆಹಾರ ಸರಬರಾಜು ಮಾಡುವಷ್ಟು ಆಹಾರ ದಾಸ್ತಾನು ಇದ್ದರು ಕರ್ನಾಟಕ ರಾಜ್ಯಕ್ಕೆ ಅಕ್ಕಿ ಪೂರೈಸಲು ದಾಸ್ತಾನಿಲ್ಲ ಎಂದು ಫುಡ್ ಕಾರ್ಪೊರೇಷನ್ ಹೇಳುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಭಾದಿಂದ ಜಿಲ್ಲಾಧಿಕಾರಿ ಕಚೇರಿ ಪತ್ರಾಂಕಿತ ಸಹಾಯಕರ ಮೂಲಕ ಮಂಗಳವಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಬಡವರಿಗೆ ಹೆಚ್ಚುವರಿಯಾಗಿ 1.66 ಲಕ್ಷ ಟನ್ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 34 ರೂ.ನಂತೆ ನೀಡುವಂತೆ ರಾಜ್ಯ ಸರ್ಕಾರ ಕೇಳುತ್ತಿದ್ದರು ದಾಸ್ತಾನಿಲ್ಲ ಎಂದು ಕೇಂದ್ರ ಹೇಳುತ್ತಿರುವುದು ಯಾವ ನ್ಯಾಯ? ಬಡವರು ತಿನ್ನೊ ಅಕ್ಕಿಗೆ ಮೋದಿ ಸರ್ಕಾರ ನಿಗಧಿ ಮಾಡಿರೋ ಬೆಲೆ ಒಂದು ಕೆ.ಜಿ.ಗೆ 34 ರೂ. ಅದೇ ಎಥೆನಾಲ್ ತಯಾರಿಸಲು ಒಂದು ಕೆ.ಜಿ.ಗೆ 24 ರೂ.ಗಳ ವೆಚ್ಚವಾಗಲಿದೆ. ಖಾಸಗಿ ಕಂಪನಿಗಳು ಎಥೆನಾಲ್ ತಯಾರಿಸಲು ರೂ.24 ರ ದರದಲ್ಲಿ ನಿಗಧಿಗಿಂತ ಹೆಚ್ಚುವರಿಯಾಗಿ ಅಕ್ಕಿ ಕೊಳ್ಳಬಹುದು ಎಂದು ಅಖಿಲ ಭಾರತ ಕಿಸಾನ್ ಸಭಾದವರು ವಿವರಿಸಿದರು.

ನವದೆಹಲಿಯಲ್ಲಿ ವರ್ಷಾನುಗಟ್ಟಲೆ ರೈತ ವಿರೋಧಿ ಕಾಯಿದೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸಿದ ಧರಣಿಗೆ ಮಣಿದು ಕೇಂದ್ರ ಸರ್ಕಾರವೇ ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆದಿರುವಾಗ ರಾಜ್ಯ ಸರ್ಕಾರ ಏಕೆ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುತ್ತಿಲ್ಲ. ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಸಬೇಕು. ಜೀವನಕ್ಕಾಗಿ ತುಂಡು ಭೂಮಿಗಳನ್ನು ಉಳುಮೆ ಮಾಡುತ್ತಿರುವ ಭೂಹೀನರಿಗೆ ಸಾಗುವಳಿ ಹಕ್ಕುಪತ್ರ ಕೊಡಬೇಕು. ಟೊಮೆಟೋ, ಈರುಳ್ಳಿ ಇನ್ನಿತರೆ ತೋಟಗಾರಿಕೆ ಬೆಳೆಗಳ ದರ ಕುಸಿದಿರುವುದರಿಂದ ಅವುಗಳ ಶೇಖರಣೆಗಾಗಿ ಸ್ಥಳೀಯವಾಗಿ ಶೀಥಲ ಗೃಹ ಉಗ್ರಾಣಗಳನ್ನು ನಿರ್ಮಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಇದೆ ಸಂದರ್ಭದಲ್ಲಿ ಒತ್ತಾಯಿಸಿದ ಅಖಿಲ ಭಾರತ ಕಿಸಾನ್ ಸಭಾದವರು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೂ ಮನವಿಯನ್ನು ಜಿಲ್ಲಾಡಳಿತದ ಮೂಲಕ ಸಮರ್ಪಿಸಿದರು.

ಕಿಸಾನ್‍ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಜಿಲ್ಲಾ ಉಪಾಧ್ಯಕ್ಷ ಕಾಂ.ಎಂ.ಬಿ. ಜಯದೇವಮೂರ್ತಿ, ತಾಲ್ಲೂಕು ಸಂಚಾಲಕ ಕಾಂ. ಸತ್ಯಕೀರ್ತಿ, ಕಾಂ.ಎಸ್.ಬಾಬು ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

ದರ್ಶನ್ ಜಾಮೀನಿಗಾಗಿ ವಕೀಲರು ಮಂಡಿಸಿದ ವಾದವೇನು..? ಇಲ್ಲಿದೆ ಪಾಯಿಂಟ್ ಪಾಯಿಂಟ್ ಹೈಲೇಟ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಟಡಿ ಮಾಡುವ ಕಾರಣಕ್ಕೆ ಆಗಾಗ ದರ್ಶನ್

ದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!

ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಧೈರ್ಯ ತುಂಬಿ ಹೋಗಿದ್ದರು. ಇಂದು ಜಾಮೀನು ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್

error: Content is protected !!