ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಇನ್ನು ಕೂಎ ಸರಿಯಾಗಿಲ್ಲ. ದಿನೇ ದಿನೇ ಹದಗೆಡುತ್ತಿದೆ. ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ಪಾಕಿಸ್ತಾನದ್ದು. ಇದೀಗ ಅಲ್ಲಿನ ವಾಹನ ಸವಾರರು ಕೂಡ ಪರದಾಡುವಂತೆ ಆಗಿದೆ. ಯಾಕಂದ್ರೆ ಪೆಟ್ರೋಲ್- ಡಿಸೇಲ್ ಬೆಲೆ ಗಗನಕ್ಕೇರಿದೆ.
ಪಾಕಿಸ್ತಾನದಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 19.95 ರೂಪಾಯಿ ಏರಿಕೆಯಾಗಿದೆ. ಡಿಸೇಲ್ ಬೆಲೆ 19.95 ರೂಪಾಯಿ ಏರಿಕೆಯಾಗಿದೆ. ಆಗಸ್ಟ್ 1 ಅಂದ್ರೆ ನಿನ್ನೆಯಿಂದಾನೇ ಈ ಏರಿಕೆಯಾದ ಬೆಲೆ, ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಈ ಮೂಲಕ ಒಂದು ಲೀಟರ್ ಪೆಟ್ರೋಲ್ ಗೆ 272 ರೂಪಾಯಿ ಆಗಲಿದ್ದು, ಡಿಸೇಲ್ ಗೆ 273 ರೂಪಾಯಿ ಆಗಿದೆ.
ಹೊಸ ದರಗಳು ಆಗಸ್ಟ್ 1ರಿಂದ ಜಾರಿಯಾಗಲಿದೆ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಪಾಕ್ ಮತ್ತಷ್ಟು ಸಾಲ ಪಡೆಯುವ ಇರಾದೆ ಹೊಂದಿತ್ತು. ಇನ್ನು ಕೆಲವೇ ದಿನದಲ್ಲಿ 300 ರೂಪಾಯಿಗೆ ತಲುಪುವ ಸಾಧ್ಯತೆಯೂ ಇದೆ.