ದಾವಣಗೆರೆ: ನಕಲಿ ದಾಖಲೆ ಸೃಷ್ಟಿಸಿ ಪಾಕಿಸ್ತಾನದ ಮಹಿಳೆ ದಾವಣಗೆರೆಯಲ್ಲಿ ವಾಸವಿದ್ದ ಮಾಹಿತಿ ಪಡೆದಿದ್ದ ಪೊಲೀಸರು ಇಂದು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹಿಂದೂಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಸದ್ಯ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪಾಕ್ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ಜೊತೆಗೆ ವಿವಾಹವಾಗಿದ್ದಳು. ಇವರ ಜೊತೆಗೆ ಪೊಲೀಸರು ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ. ಹನೀಫ್, ಸೊಸೆ, ಅಳಿಯನನ್ನೂ ಬಂಧಿಸಲಾಗಿದೆ. ಇವರೆಲ್ಲಾ ಹಿಂದೂ ಹೆಸರಗಳನ್ನು ಇಟ್ಟುಕೊಂಡು ವಾಸವಿದ್ದರು ಎನ್ನಲಾಗಿದೆ.
ರಶೀದ್ ಅಲಿ ಎಂಬಾತ ತನ್ನ ಹೆಸರನ್ನು ಶಂಕರ್ ಶರ್ಮಾ, ಆಯೇಷಾ ಹನೀಫಾ ಎಂಬಾಕೆ ಆಶಾ ಶರ್ಮಾ, ಮೊಹಮ್ಮದ್ ಹನೀಫ್ ಎಂವಾತ ರಾಮ್ ಬಾಬಾ ಶರ್ಮಾ, ರುಬೀನಾ ಎಂಬಾಕೆ ರಾಣಿ ಶರ್ಮಾ ಎಂದು ಎಲ್ಲರೂ ಶರ್ಮಾ ಹೆಸರನ್ನೇ ತಮ್ಮ ಹೆಸರಿನ ಜೊತೆಗೆ ಇಟ್ಟುಕೊಂಡಿದ್ದರು. ಸದ್ಯ ಬೆಂಗಳೂರು ಪೊಲೀಸರಿಗೆ ಪಕ್ಕಾ ಮಾಹಿತಿ ಇದ್ದ ಕಾರಣದಿಂದ ಎಲ್ಲರನ್ನು ಬಂಧಿಸಿದ್ದಾರೆ. ವಿಚಾರ ತಿಳಿದು ಅಕ್ಕ ಪಕ್ಕದವರು ಗಾಬರಿಯಾಗಿದ್ದಾರೆ.
ಇನ್ನು ಇದೇ ತರ ಬೆಂಗಳೂರಿನ ಜಿಗಣಿಯಲ್ಲೂ ಪಾಕಿಸ್ತಾನದ ಪ್ರಜೆಗಳ ಬಂಧನವಾಗಿದೆ. ಈ ಸಂಬಂಧ ಪೊಲೀಸರು ಹೈಅಲರ್ಟ್ ಆಗಿದ್ದು, ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ತನಿಖಾ ತಂಡಗಳು ದೆಹಲಿ, ಚೆನ್ನೈ, ಬೆಳಗಾವಿ, ಮುಂಬೈ ಸೇರಿದಂತೆ ಹಲವೆಡೆ ಮಾಹಿತಿಯನ್ನು ಕಲೆ ಹಾಕಲಿವೆ. ಪಾಕಿಸ್ತಾನದ ಪ್ರಜೆಗಳಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟವರು ಯಾರು ಎಂಬ ಪ್ರಶ್ನೆಯೆ ಇಲ್ಲಿ ಬಹಳ ಮುಖ್ಯವಾಗಿದೆ. ಈಗ ಅವರ ಹುಡುಕಾಟವೂ ನಡೆಯುತ್ತಿದೆ.