ಗದಗ: ಸಿಎಂ ಸಂಚರಿಸುವಾಗ ಜೀರೋ ಟ್ರಾಫಿಕ್ ರೂಲ್ಸ್ ಮಾಡುತ್ತಾರೆ ಒಪ್ಪಿಕೊಳ್ಳೋಣಾ. ಆದರೆ ಸಿಎಂ ಆಗಮಿಸಿದರು ಎಂಬ ಕಾರಣಕ್ಕೆ ವ್ಯಾಪಾರ ಮಾಡುತ್ತಿದ್ದ ಸಣ್ಣ ಪುಟ್ಟ ಅಂಗಡಿಗಳನ್ನೇ ಮುಚ್ಚಿಸುವುದು ಎಷ್ಟು ನ್ಯಾಯ ಎಂಬ ಪ್ರಶ್ನೆ ಕೇಳುತ್ತಿದ್ದಾರೆ ವ್ಯಾಪಾರಸ್ಥರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಅವರು ಚಾಲನೆ ಕೊಡುವ ಸಲುವಾಗಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಸಿಎಂ ಬೊಮ್ಮಾಯಿ ಅವರಿಗೆ ಜೀರೋ ಟ್ರಾಫಿಕ್ ನೀಡುವ ಸಲುವಾಗಿ, ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿದ್ದ ಸಣ್ಣ ಪುಟ್ಟ ಹೂ ಹಣ್ಣು ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಸೆಕ್ಯೂರಿಟಿ ಚೆಕ್ ಗಾಗಿ ಬಂದಿದ್ದ ಪೊಲೀಸರು ಅಂಗಡಿಯವರಿಗೆ ಕ್ಲೋಸ್ ಮಾಡಲು ಹೇಳಿದ್ದಾರೆ.
ಬೆಳಗಿನಜಾವದಲ್ಲಿ ಆಶ್ರಮಕ್ಕೆ ಬರುವ ಭಕ್ತರನ್ನು ನಂಬಿಯೆ ಇಲ್ಲಿ ವ್ಯಾಪಾರ ನಡೆಯುತ್ತದೆ. ಪೊಲೀಸರು ಏಕಾಏಕಿ ಅಂಗಡಿ ಮಾಡಿಸಿದ್ದ ಕಾರಣ ಸುಮಾರು ಒಂದು ಸಾವಿರ ರೂಪಾಯಿ ನಷ್ಟವಾಗಿದೆ ಎನ್ನುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿ ಕೊಟ್ಟಾಗಲೂ ಈ ರೀತಿ ಬಂದ್ ಆಗಿರಲಿಲ್ಲ. ರಾಜ್ಯಪಾಲರು ಭೇಟಿ ಕೊಟ್ಟಾಗಲು ಬಂದ್ ಆಗಿರಲಿಲ್ಲ ಅಂತಾರೆ ಅಲ್ಲಿನ ಸ್ಥಳೀಯರು.
ಇಂದು ಬೆಳಗ್ಗೆ ನಗರಕ್ಕೆ ಬಂದ ಸಿಎಂ ಬೊಮ್ಮಾಯಿ ಅವರು ಮೊದಲಿಗೆ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗಾ ಮಹಾಸ್ವಾಮಿಗಳ ಐಕ್ಯಮಂಟಪ ಉದ್ಘಾಟನೆ ಮಾಡಿದರು. ನಂತರ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಭೇಟಿ ನೀಡಿ ಬಂದಿದ್ದಾರೆ.