ಬೆಂಗಳೂರು: ವಂಚನೆ ಆರೋಪದ ಮೇಲೆ ಬಂಧನವಾಗಿರುವ ಚೈತ್ರಾ ಕುಂದಾಪುರ ಹಿಸ್ಟರಿ ಕೆದಕುತ್ತಾ ಇರುವ ಸಿಸಿಬಿ ಪೊಲೀಸರಿಗೇನೆ ಶಾಕ್ ಆಗುತ್ತಿದೆ. ಹುಡುಕುತ್ತಾ ಹೋದಂತೆ ರಹದಾರಿಯೇ ಕಾಣುತ್ತಿದೆ. ಇಂದು ಚೈತ್ರಾ ಗ್ಯಾಂಗ್ ಹೆಸರಲ್ಲಿ ಕೋಟಿ ಕೋಟಿ ಹಣ ಡೆಪಾಸಿಟ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಚೈತ್ರಾ ಕುಂದಾಪುರ ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ವಿಚಾರಕ್ಕೆ ನಾನಾ ರೀತಿಯ ನಾಟಕವನ್ನೇ ಆಡಿದ್ದಾಳೆ. ಅನಾರೋಗ್ಯ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿನ್ನೆ ಡಿಸ್ಚಾರ್ಜ್ ಆದ ಚೈತ್ರಾಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಚೈತ್ರಾ ಹೆಸರಲ್ಲಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 1 ಕೋಟಿ 8 ಲಕ್ಷ ಹಣ ಎಫ್ಡಿ ಇಟ್ಟಿರುವುದು ತಿಳಿದು ಬಂದಿದೆ.
ಅಷ್ಟೆ ಅಲ್ಲ ಚೈತ್ರಾಳ ಗ್ಯಾಂಗ್ ನವರ ಹೆಸರಲ್ಲೂ ಹಣ ಡೆಪಾಸಿಟ್ ಆಗಿದೆ. 3 ಲಾಕರ್ ಹೊಂದಿದ್ದು, ಅದರಲ್ಲಿ 40 ಲಕ್ಷ ಮೌಲ್ಯದ ಚಿನ್ನದ ಬಿಸ್ಕೇಟ್ ಇದೆಯಂತೆ. ಕಾರ್ಕಳದ ಬಳಿ ಪ್ರಾಪರ್ಟಿಯೊಂದಕ್ಕೆ 60 ಲಕ್ಷ ಇನ್ವೆಸ್ಟ್ ಮಾಡಿದ್ದಾರಂತೆ. ಚೈತ್ರಾಳ ಗ್ಯಾಂಗ್ ಗಗನ್, ಇತ್ತಿಚೆಗೆ ಬೆಂಗಳೂರಿನಲ್ಲಿ ಸೈಟ್ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಶ್ರೀಕಾಂತ್ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನೆ ತೆಗೆದುಕೊಂಡಿದ್ದಾನಂತೆ.
ಸಿಸಿಬಿ ಇದೆಲ್ಲದರ ಮೂಲ ಹುಡುಕಿದ್ದು, ಹಣ, ಒಡವೆ, ಆಸ್ತಿಯನ್ನೆಲ್ಲ ಜಪ್ತಿ ಮಾಡಲಾಗಿದೆ. ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಬಳಿ ಐದು ಕೋಟಿ ಪಡೆದ ಚೈತ್ರಾ, ಇನ್ನು ಯಾರ್ಯಾರ ಬಳಿ ಅದೆಷ್ಟು ಹಣ ಪಡೆದು ಮೋಸ ಮಾಡಿದ್ದಾಳೋ ಏನೋ. ತಾನು ಹಿಂದೂ ಕಾರ್ಯಕರ್ತೆ ಎಂಬಂತೆ ಜೋರು ಜೋರಾಗಿ ಮಾತನಾಡಿಯೇ ಎಲ್ಲರನ್ನು ಮರಳು ಮಾಡಿದ್ದಾಳೆ.