Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಣಿಪುರ ಹಿಂಸಾಚಾರ : ಸೂಕ್ತ ಕಾನೂನು ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ ಚಿತ್ರದುರ್ಗ ಜಿಲ್ಲಾ ಬಹುಜನ ಸಮಾಜವಾದಿ ಪಾರ್ಟಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.27) : ಮಣಿಪುರದಲ್ಲಿ  ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಬಹುಜನ ಸಮಾಜವಾದಿ ಪಾರ್ಟಿ ಜಿಲ್ಲಾ ಸಮಿತಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.

ಮಣಿಪುರದಲ್ಲಿ ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು  ಬೆತ್ತಲೆಗೊಳಿಸಿ  ನಡುಬೀದಿಯಲ್ಲಿ ಮೆರವಣಿಗೆ ಮಾಡಿ ನಾನಾ ರೀತಿ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆಯಲ್ಲಿ ಇಡಿ ದೇಶವೆ ತಲೆತಗ್ಗಿಸುವಂತಹ  ಅಮಾನುಷ ಕೃತ್ಯವಾಗಿದೆ. ಈ ದೌರ್ಜನ್ಯವನ್ನು ತಡೆಗಟ್ಟಲು ಪ್ರಯತ್ನಿಸಿದ ಸಂತ್ರಸ್ತೆ ಮಹಿಳೆಯ ತಮ್ಮನನ್ನು ಈ ಕಿರಾತಕರು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಈ ದೌರ್ಜನ್ಯವನ್ನು ಕರ್ನಾಟಕ ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.

ಇತ್ತೀಚಿಗೆ ಮೈತೇಯಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿರುವ ಬಗ್ಗೆ ಉಚ್ಚನ್ಯಾಯಾಲದ ತೀರ್ಪು ಬಂದ ಮೇಲೆ ಹಿಂಸಾಚಾರವು ಹೆಚ್ಚಾಯಿತೆಂದು ಹೇಳಬಹುದು. ರಾಜಕೀಯವಾಗಿ ಬಲಿಷ್ಠರಾದ ಮತ್ತು ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಮೈತೇಯಿ ಸಮಾಜಕ್ಕೆ ಮೀಸಲಾತಿ ಬಲಸಿಕ್ಕಿದ್ದು ಹಿಂಸಾಚಾರಕ್ಕೆ ಕಾರಣವಾಗಿರಬಹುದು. ಈ ಅಮಾನುಷ ಘಟನೆಯಲ್ಲಿ ಸುಮಾರು 200  ಜನಕ್ಕೂ ಮೇಲ್ಪಟ್ಟು ದೌರ್ಜನ್ಯ ಕೊರರು ಬಾಗಿಯಾಗಿದ್ದು ಅವರನ್ನು ಕೊಡಲೆ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಬಿಎಸ್‌ಪಿ ಒತ್ತಾಯಿಸುತ್ತದೆ.

ಮಣಿಪುರದಲ್ಲಿ ಬಿ.ಜೆ.ಪಿ ಸರ್ಕಾರ ಅಸ್ತಿತ್ವದಲ್ಲಿದ್ದು ಬಿರೆನ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆ ವೇಳೆ ಡಬಲ್ ಇಂಜಿನ್ ಸರ್ಕಾರಕ್ಕೆ ಮತ ನೀಡುವಂತೆ  ಪ್ರಧಾನಮಂತ್ರಿಯಾಗಿ  ಅಬ್ಬರದ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಮೇಲ್ಕಂಡ ರೀತಿಯಲ್ಲಿ ಕುಕಿ ಸಮುದಾಯದ ವಿರುದ್ದ ಹಿಂಸಾಚಾರ ನಿಲ್ಲಿಸದೇ ಮೈತೇಯಿ ಸಮುದಾಯದ ಪರವಾಗಿ ಪಕ್ಷ ಪಾತದಿಂದ ಮುಖ್ಯಮಂತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೇರೆ ರಾಜ್ಯಗಳಲ್ಲಿ ಇಂತಹ ಅತ್ಯಾಚಾರಗಳು ನೂರಾರು ಕೊಲೆಗಳು ನಡೆದಿಲ್ಲವೆ. ಎಂದು ಹೇಳುವ ಮೂಲಕ ಈ ಘಟನೆಯನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿರುವುದು. ಖಂಡನೀಯ.

ಮಣಿಪುರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿರೆನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸುತ್ತೇವೆ. ಇವರು ರಾಜ್ಯವನ್ನು ಕೊಡದಿದ್ದರೆ ರಾಜ್ಯಪಾಲರು ಇವರನ್ನು ಮುಖ್ಯಮಂತ್ರಿ ಪದವಿಯಿಂದ ವಜಾಗೊಳಿಸುವಂತೆ ಒತ್ತಾಯಿಸುತ್ತೇವೆ.

ಇಷ್ಟೆಲ್ಲ ಅಮಾನುಷ ಕೃತ್ಯಗಳು ಕಳೆದ 80 ದಿನಗಳಿಂದ ನಡೆಯುತ್ತಿದ್ದರೂ ಸಹ ಪ್ರಧಾನಮಂತ್ರಿ ನರೇಂದ್ರಮೋದಿಯವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಣುಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು  ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿ.ಎಸ್.ಪಿ ಒತ್ತಾಯಿಸುತ್ತದೆ.

ಈ ಕುರಿತು ರಾಷ್ಟ್ರಪತಿಗಳು ಮಣಿಪುರ ರಾಜ್ಯದ ಜನರ ಪ್ರಾಣ ಮತ್ತು ಆಸ್ತಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಯಿತು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಜಿಲ್ಲಾ ಸಂಯೋಜಕರಾದ ಕೆ.ಎನ್.ದೊಡ್ಡೆಟ್ಟೆಪ್ಪ, ಶಿವಮೂರ್ತಿ, ಜಿಲ್ಲಾಧ್ಯಕ್ಷರಾದ ಎನ್.ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಉಪಾಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ತಾಲ್ಲೂಕು  ಪದಾದಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ರೇಟ್ ಎಷ್ಟು ?

    ಸುದ್ದಿಒನ್, ಚಿತ್ರದುರ್ಗ, ನವಂಬರ್. 25 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ ಉತ್ಪನ್ನಗಳ (ಸರಕು) ಇಂದಿನ               (

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

ಚಿತ್ರದುರ್ಗ | ಜಿ.ಆರ್. ಹಳ್ಳಿ ಬಳಿ ಕಾರಿಗೆ ಕಾರು ಡಿಕ್ಕಿ : 8 ಮಂದಿಗೆ ಗಾಯ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ರಾಷ್ಟ್ರೀಯ ಹೆದ್ದಾರಿ 13ರ ಗುಡ್ಡದ ರಂಗವ್ವನಹಳ್ಳಿ ಸಮೀಪದ CNG ಪೆಟ್ರೋಲ್ ಬಂಕ್ ಬಳಿ ನಿನ್ನೆ ರಾತ್ರಿ (ಭಾನುವಾರ) 10 ಗಂಟೆ ಸಮಯದಲ್ಲಿ ಇನೋವಾ ಕಾರು ಹಾಗೂ

error: Content is protected !!