ಸುದ್ದಿಒನ್, ಚಳ್ಳಕೆರೆ, (ಆ.03) : ಖಾತೆ ಬದಲಾವಣೆ ಮಾಡಿಕೊಡುವ ಸಲುವಾಗಿ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಲೀಲಾವತಿ ಮತ್ತು ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜು ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೈ, ನಾಗರಾಜಾಚಾರಿ ಇವರು ತಮ್ಮ ಪತ್ನಿ ಶ್ರೀಮತಿ ಸುವರ್ಣಮ್ಮ ಇವರ ಹೆಸರಿನಲ್ಲಿ, ನಗರದ ವಾರ್ಡ್ ನಂ: 23ರಲ್ಲಿ ಮನೆಯನ್ನು ಖರೀದಿಸಿದ್ದು, ಪತ್ನಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ಸಂಬಂಧ ದಿ: 26-05-2023 ರಂದು ಆರ್ಜಿಯನ್ನು ಚಳ್ಳಕೆರೆ ನಗರಸಭೆಗೆ ಸಲ್ಲಿಸಿರುತ್ತಾರೆ.
ಅರ್ಜಿ ಸಲ್ಲಿಸಿದ ಎರಡು ತಿಂಗಳ ನಂತರ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಇವರನ್ನು ಭೇಟಿ ಮಾಡಿ ವಿಚಾರಿಸಿದರೂ ಕೆಲಸವಾಗದ ಕಾರಣ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಲೀಲಾವತಿ ರವರನ್ನು ಭೇಟಿಯಾಗಿ ತನ್ನ ಕೆಲಸದ ಬಗ್ಗೆ ವಿಚಾರಿಸಿದಾಗ ಅವರು ರೂ. 5.00 ಲಕ್ಷಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ.
ಅದರಂತೆ ದಿ :03-08-2023 ರಂದು ಆರೋಪಿ-1 ಶ್ರೀಮತಿ ಲೀಲಾವತಿ, ಪೌರಾಯುಕ್ತ, ನಗರಸಭೆ, ಚಳ್ಳಕೆರೆ ಇವರ ನಿರ್ದೇಶನದಂತೆ ಆರೋಪಿ-2 ಶ್ರೀ ನಿಶಾನಿ ಕಾಂತರಾಜ್, ಬಿಲ್ ಕಲೆಕ್ಟರ್, ನಗರಸಭೆ, ಚಳ್ಳಕೆರೆ ರವರು ಆರೋಪಿ-1 ರವರು ಉಪಯೋಗಿಸುತ್ತಿದ್ದ ಕಾರ್ನಲ್ಲಿ ಬಂದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಎಲ್.ಪಿ. ಗೇಟ್ ಬಳಿ ಸಂಜೆ ಸುಮಾರು 4.15ರ ಸಮಯದಲ್ಲಿ ವೈ, ನಾಗರಾಜಾಚಾರಿ ಇವರಿಂದ ರೂ. 3,00,000/-ಗಳ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಇಬ್ಬರನ್ನೂ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಲಾಗಿರುತ್ತದೆ. ಮುಂದಿನ ತನಿಖೆಯನ್ನು ಎನ್. ಮೃತ್ಯುಂಜಯ, ಡಿವೈ.ಎಸ್.ಪಿ., ಚಿತ್ರದುರ್ಗ ಇವರು ಕೈಗೊಂಡಿರುತ್ತಾರೆ.
ಟ್ರ್ಯಾಪ್ ಕಾಲಕ್ಕೆ ಚಿತ್ರದುರ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ ಶ್ರೀಮತಿ ವೈ.ಎಸ್, ಶಿಲ್ಪಾ, ಆರ್. ವಸಂತಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಸಿ.ಹೆಚ್.ಸಿ., ಹೆಚ್. ಶ್ರೀನಿವಾಸ, ಸಿ.ಹೆಚ್.ಸಿ., ಶ್ರೀಮತಿ ಎಸ್.ಆರ್.ಪುಷ್ಪ, ಮ.ಹೆಚ್.ಸಿ., ಎಲ್.ಜಿ.ಸತೀಶ, ಸಿಪಿಸಿ, ಜೆ.ಎನ್. ಸಂತೋಷ್ ಕುಮಾರ್, ಸಿಪಿಸಿ, ಎಂ.ವೀರೇಶ್, ಸಿಪಿಸಿ, ಎಸ್. ರಾಜೇಶ್, ಸಿಪಿಸಿ, ಮಂಜುನಾಥ, ಸಿಪಿಸಿ, ಮಹಲಿಂಗಪ್ಪ, ಸಿಪಿಸಿ, ಕೆ.ಟಿ. ಮಾರುತಿ, ಸಿಪಿಸಿ, ಆರ್.ವೆಂಕಟೇಶ್ಕುಮಾರ್, ಎಪಿಸಿ, ಟಿ.ವಿ.ಸಂತೋಷ್, ಎಪಿಸಿ, ಡಿ.ಮಾರುತಿ, ಎಪಿಸಿ ಮತ್ತು ಎನ್.ಎಲ್.ಶ್ರೀಪತಿ, ಎಪಿಸಿ ಹಾಗೂ ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಠಾಣೆಯ ಸಿಬ್ಬಂದಿಗಳಾದ ಆರ್. ಮಹಂತೇಶ, ಸಿ.ಹೆಚ್.ಸಿ., ಶ್ರೀಮತಿ ಆರ್. ಸಾವಿತ್ರಮ್ಮ, ಮ.ಪಿ.ಸಿ., ಪ್ರಶಾಂತ್ ಕುಮಾರ್, ಸಿಪಿಸಿ ಮತ್ತು ತರುಣ್ಕುಮಾರ್, ಎಪಿಸಿ ಇವರುಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿರುತ್ತಾರೆ.