ಬೆಂಗಳೂರು: ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಆದರೀಗ ಬಂದ್ ಹಿಂಪಡೆಯಲಾಗಿದೆ.
ಕರ್ನಾಟಕ ಬಂದ್ ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆದ್ರೆ ನಾವೂ ಮಾಡಿಯೇ ಮಾಡ್ತೀವಿ ಅಂತ ಕನ್ನಡ ಪರ ಸಂಘಟನೆಯವರು ಪಟ್ಟು ಹಿಡಿದಿದ್ದರು. ಅದರಲ್ಲೂ ವಾಟಾಳ್ ನಾಗರಾಜ್ ಬಣ ಯಾರು ತಡೆಯುತ್ತಾರೆ ನೋಡಿಯೇ ಬಿಡೋಣಾ ಎನ್ನುವಷ್ಟು ಹಠ ತೊಟ್ಟಿದ್ದರು. ಇದೀಗ ಸಾಕಷ್ಟು ವಿರೋಧದ ನಡುವೆ ಬಂದ್ ಕ್ಯಾನ್ಸಲ್ ಆಗಿದೆ.
ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಬಣ, ಉಮೇಶ್ ಬಣಕಾರ್ ಸೇರಿ ಸಂಜೆ ಸಿಎಂ ಭೇಟಿ ಮಾಡಿದ್ದು, ನಾಳೆ ಬಂದ್ ಮಾಡುವ ನಿರ್ಧಾರವನ್ನ ಹಿಂಪಡೆದಿದ್ದಾರೆ.