Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಬಾರಿ ಹುಬ್ಬಳ್ಳಿಯಲ್ಲಿ ಹೈವೋಲ್ಟೇಜ್ ಎಲೆಕ್ಷನ್ : ಜೆಪಿ ನಡ್ಡಾ ಹುಬ್ಬಳ್ಳಿಗೆ ಬರ್ತಾ ಇರೋದ್ಯಾಕೆ..?

Facebook
Twitter
Telegram
WhatsApp

 

 

ಬೆಂಗಳೂರು: ಇಷ್ಟು ವರ್ಷ ಬಿಜೆಪಿಯಲ್ಲೇ ಇದ್ದಂತ ಜಗದೀಶ್ ಶೆಟ್ಟರ್ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಯಾಗಿ ನಿರೀಕ್ಷಿತ ಕ್ಷೇತ್ರಕ್ಕೆ ಟಿಕೆಟ್ ಕೂಡ ಪಡೆದಿದ್ದಾರೆ. ಆದ್ರೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಮಾತ್ರ ಈ ಬಾರಿ ಹೈವೋಲ್ಟೇಜ್ ಪಂದ್ಯವಾಗಲಿದೆ ಎಂಬುದಂತು ಖಚಿತವಾಗಿದೆ.

ಸದ್ಯ ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ನಡೆಸಿದ್ರೆ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಸ್ಪರ್ಧೆಯೊಡ್ಡಿದ್ದಾರೆ. ಈಗಾಗಲೇ ಬಿಜೆಪಿಗೆ ಇದರ ನಡುಕ ಶುರುವಾಗಿದೆ. ಕಾಂಗ್ರೆಸ್ ಲಿಂಗಾಯತ ಮತ ಸೆಳೆಯಲು ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿ, ಸ್ಪರ್ಧೆಗೆ ಇಳಿಸಿದೆ. ಈ ಕಾರಣಕ್ಕಾಗಿಯೇ ಬಿಜೆಪಿಗೆ ಆತಂಕ ಶುರುವಾಗಿದ್ದು, ಕಿತ್ತೂರು ಭಾಗದಲ್ಲಿ ಸ್ಥಾನ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹೀಗಾಗಿ ಜೆಪಿ ನಡ್ಡಾ ಹುಬ್ಬಳ್ಳಿ ಕಡೆಗೆ ಪಯಣ ಬೆಳೆಸಿದ್ದಾರೆ.

ರಾಜ್ಯದಲ್ಲಿ ಜೆಪಿ ನಡ್ಡಾ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ ಸಂಜೆ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ನಡೆಯುವ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸುವುದರ ಜೊತೆಗೆ, ಹುಬ್ಬಳ್ಳಿ – ಧಾರವಾಡದ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ನಾಡಿದ್ದು, ಸಿದ್ದರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರಿನಲ್ಲಿ ಶಫಿ ಉಲ್ಲಾ ರವರ “ಕಣ್ಮರೆ” ಕೃತಿ ಲೋಕಾರ್ಪಣೆ

  ಸುದ್ದಿಒನ್, ಹಿರಿಯೂರು, ಅಕ್ಟೋಬರ್. 22 : ರವಿ ಕಾಣದ್ದನ್ನು ಕವಿ ಕಂಡ” ಎಂಬಂತೆ ಎಲ್ಲಿ ಪ್ರೀತಿ, ವಿಶ್ವಾಸ ಗೌರವ ಬಾಂಧವ್ಯ ಬೆಸೆಯುವ ಸಮಾನ ಶುದ್ಧ ಮನಸ್ಸು ಇರುತ್ತದೋ ಅಲ್ಲಿ ನಾವು ಏನಾದರೂ ಸಾಧಿಸಬಹುದು

ಈ ರಾಶಿಯವರಿಗೆ ಸಾಲಗಾರರ ಕಾಟ ಅಧಿಕ, ಈ ರಾಶಿಯವರ ಮಕ್ಕಳ ವೈಭೋಗ ನೋಡಕ್ಕೆ ಎರಡು ಕಣ್ಣು ಸಾಲದು!

ಈ ರಾಶಿಯವರಿಗೆ ಸಾಲಗಾರರ ಕಾಟ ಅಧಿಕ, ಈ ರಾಶಿಯವರ ಮಕ್ಕಳ ವೈಭೋಗ ನೋಡಕ್ಕೆ ಎರಡು ಕಣ್ಣು ಸಾಲದು! ಮಂಗಳವಾರ ರಾಶಿ ಭವಿಷ್ಯ -ಅಕ್ಟೋಬರ್-22,2024 ಸೂರ್ಯೋದಯ: 06:15, ಸೂರ್ಯಾಸ್ತ : 05:46 ಶಾಲಿವಾಹನ ಶಕೆ -1946

ಚಿತ್ರದುರ್ಗ | 26 ವರ್ಷಗಳ ಬಳಿಕ ಗುರು – ಶಿಷ್ಯರ ಸಮ್ಮಿಲನ : ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಂದನೆ ಕಾರ್ಯಕ್ರಮ!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 21 : ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ 1996-97 ಹಾಗೂ 1997 – 98 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಂದ ಗುರು ಶಿಷ್ಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ

error: Content is protected !!