ಕರಾವಳಿ, ಮಲೆನಾಡು, ದಕ್ಷಿಣ ಕನ್ನಡದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಶಿರಸಿಯ ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ನೀರು ನಿಂತಿದೆ. ಮಂಡ್ಯದ ಕೆಆರ್ಎಸ್ ಡ್ಯಾಂಗೆ ಎರಡೇ ಇಂಚು ಬಾಕಿ ಇದೆ. ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಶಿವಮೊಗ್ಗದಲ್ಲಿ ಗುಡ್ಡ ಕುಸಿತವಾಗಿದ್ದು, ಸೇತುವೆ ಮುಳುಗಡೆಯಾಗಿದೆ. ಅಷ್ಟೇ ಅಲ್ಲ ರಸ್ತೆ ಸಂಪರ್ಕ ಬಂದ್ ಆಗಿದೆ. ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ಸಂಪರ್ಕ ಬಂದ್ ಆಗಿದೆ. ಶಿವಮೊಗ್ಗ ಟು ಉಡುಪಿ ಮಾರ್ಗ ಕೂಡ ಬಂದ್ ಆಗಿದೆ. ರಸ್ತೆಯಲ್ಲಿರುವ ಮಣ್ಣನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ. ಬೇರೆ ಮಾರ್ಗ ಬಳಸಲು ಸೂಚನೆ ನೀಡಲಾಗುದೆ.
ಇನ್ನು ಸಾಗರದ ಅಡಗಳಲೆ ಗ್ರಾಮದಲ್ಲೂ ಗುಡ್ಡ ಕುಸಿತವಾಗಿದೆ. ರಸ್ತೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಶೇಖರಣೆಯಾಗಿದೆ. ಮಡಿಕೇರಿಯ ಮುಕ್ಕೋಡ್ಲು ಭದ್ರಕಾಳಿ ದೇವಸ್ಥಾನ ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಬಂಟ್ವಾಳ ತಾಲೂಕಿನಲ್ಲಿ ಮಳೆ ಮುಂದುವರೆದಿದೆ. ಬಂಟ್ವಾಳದ ಶಾರಾದ ಶಾಲೆಯ ಆವರಣದಲ್ಲಿ ಸಂಪೂರ್ಣ ಜಲಾವೃತವಾಗಿದೆ.