ಬೆಂಗಳೂರು: ಎಲ್ಲ ಸಂಬಂಧಗಳು ಹುಟ್ಟಿದ ನಂತರ. ತಾಯಿ ಸಂಬಂಧ ಮಾತ್ರ ಭೂಮಿಗೆ ಬರುವ ಮುನ್ನಾ ಇರುತ್ತೆ. ತಂದೆ, ತಮ್ಮ, ಅಣ್ಣ ಎಲ್ಲವೂ ನಂತರ ಸಂಬಂಧಗಳು. ತಾಯಿ ಸ್ಥಾನ ಬಹಳ ದೊಡ್ಡದು. ದೇವರು, ತಾಯಿ ಮಧ್ಯ ಯಾರನ್ನ ಆಯ್ಕೆ ಮಾಡ್ತಾರೆ ಅಂದ್ರೆ, ನಾನು ತಾಯಿಯನ್ನ ಆಯ್ಕೆ ಮಾಡ್ತೀನಿ. ಷರತ್ತು ಇಲ್ಲದೆ ಪ್ರೀತಿ ನೀಡುವಳು ತಾಯಿ ಮಾತ್ರ ಎಂದು ಸಿಎಂ ಬೊಮ್ಮಾಯಿ ತಾಯಿ ಮೇಲಿನ ಪ್ರೀತ ಬಗ್ಗೆ ಹಾಡಿ ಹೊಗಳಿದ್ದಾರೆ.
ರಾಜ್ಯ ಸರ್ಕಾರ, ನಮ್ಮೆಲ್ಲರ ಜವಾಬ್ದಾರಿ ತಾಯಿಯನ್ಮ ರಕ್ಷಣೆ ಮಾಡಬೇಕು. ಯಾಕೆಂದರೆ ಉತ್ತಮ ಮಗುವಿಗೆ ಜನ್ಮ ನೀಡೋದು ತಾಯಿ. ತಾಯಿ, ಮಗುವಿಗೆ ಪೌಷ್ಟಿಕ ಆಹಾರ ನೀಡಬೇಕು. ದೇಶದಲ್ಲಿ ಆಹಾರದಲ್ಲಿ ಪೌಷ್ಠಿಕ ಆಹಾರ ಕೊರತೆಯಿಂದ ಮಕ್ಕಳು ಅನಾರೋಗ್ಯ ತುತ್ತಾಗುತ್ತಿದ್ದಾರೆ. ಈಗ ಸಮಯ ಬಂದಿದೆ ಪೌಷ್ಠಿಕ ಆಹಾರ ನೀಡಬೇಕು. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ನೀಡಬೇಕು.
ರೇನ್ ಬೋ ಮಕ್ಕಳ ಆಸ್ಪತ್ರೆಯಿಂದ ಪೀಡಿಯಾಟ್ರಿಕ್ಸ್ ಸಂವಾದ ನಡೆಯುತ್ತಿದ್ದು, ಇದರಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ನಮ್ಮ ಸರ್ಕಾರ ನೀವು ಮಾಡುವ ನಿರ್ಧಾರವನ್ನ ತೆಗೆದುಕೊಳ್ತೀರಾ. ಅದನ್ನ ನಾವು ಜಾರಿಗೊಳಿಸುತ್ತೇವೆ ಎಂದು ಭರವಸೆ. ಈ ವೇಳೆ ಚಪ್ಪಾಳೆ ಹೊಡೆಯುವಂತೆ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಹೇಳಿದ ಸಿಎಂ. ನಾನು ನಿಮಗೆ ಹೇಳಿದ್ದು ತಲುಪಿದಿಯೋ ಇಲ್ವ. ಉತ್ತಮ ಭವಿಷ್ಯಕ್ಕಾಗಿ ಸರ್ಕಾರದ ಜೊತೆ ವೈದ್ಯರು ಕೈಜೋಡಿಸಿ. ನಮ್ಮ ಸರ್ಕಾರ ಬಜೆಟ್ ನಲ್ಲಿ ಹಣ ನಿಗದಿ ಮಾಡಿದೆ ಎಂದಿದ್ದಾರೆ.
ಬಡತನ ನಿರ್ಮೂಲನ ಮಾಡೋಕೆ ಸರ್ಕಾರ ಬದ್ಧವಾಗಿದೆ. ಶಿಕ್ಷಣ ನೀಡುತ್ತಿದ್ದೇವೆ, ಶಾಲೆಗಳನ್ನ ನಿರ್ಮಾಣ ಮಾಡ್ತಾ ಇದ್ದೇವೆ. ಹಳ್ಳಿಯಲ್ಲಿ ಉತ್ತಮ ಆರೋಗ್ಯ ನೀಡಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡ್ತಾ ಇದೆ ಎಂದಿದ್ದಾರೆ.