Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆ ಅಂಗವಾಗಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಎಂಟು ದಿನಗಳ ಕಾಲ ನಡೆದ ಅಂತರ ಶಾಲಾ ಮಟ್ಟದ ಸಾಂಸ್ಕøತಿಕ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಮತ್ತು ಪದಕಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ ಮಾತನಾಡಿ ಮಕ್ಕಳೆಂದರೆ ದೇವರ ಸಮಾನ, ಏಕೆಂದರೆ ಅವರಲ್ಲಿ ಕಪಟತನ, ಮೋಸ ಇರುವುದಿಲ್ಲ. ಯಾವ ಮನೆಯಲ್ಲಿ ಮಗು ಕುಣಿದು ಕುಪ್ಪಳಿಸಿ ಆನಂದಿಸುತ್ತದೋ ಅಂತಹ ಮನೆಯಲ್ಲಿ ಸಂಭ್ರಮವಿರುತ್ತದೆ. ನೆಹರುರವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ನೆಹರು ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಆಚರಿಸಲಾಗುವುದೆಂದರು.

ಸಾಂಸ್ಕøತಿಕ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಆಡಬೇಕು. ಸೋತವರು ಮುಂದೆ ಗೆಲ್ಲಲು ಶ್ರಮಿಸಬೇಕೆಂದು ತಿಳಿಸಿದರು.

ಬಿ.ಇ.ಡಿ.ಕಾಲೇಜು ಪ್ರಾಂಶುಪಾಲರಾದ ಡಾ.ಅನಂತರಾಮು, ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಕೇಶವಮೂರ್ತಿ, ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಾಸಕರನ್ನು ಕೊಳ್ಳಲು ಬಿಜೆಪಿಗೆ ಕೋಟಿ ಕೋಟಿ ರೂಪಾಯಿ ಎಲ್ಲಿಂದ ಬಂತು: ಸಿಎಂ ಸಿದ್ದರಾಮಯ್ಯ ಪ್ರಶ್ನೆ

  ಮಹಾರಾಷ್ಟ್ರ, ನವೆಂಬರ್ 15:  ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾ ನಾ ಖಾವೋಂಗಾ, ನಾ ಖಾನೆದೂಂಗಾ ಎನ್ನುತ್ತಾರೆ . ಹಾಗಾದರೆ ಆಪರೇಶನ್ ಕಮಲ ಮಾಡಲು ಹಣ ಎಲ್ಲಿಂದ ಬಂತು ಎಂದು ಸಿಎಂ ಸಿದ್ದರಾಮಯ್ಯ

ಗ್ರಾಂ.ಪಂ. ಅನುದಾನದಲ್ಲಿ ಅಕ್ರಮ : ತನಿಖೆಗೆ ಕೆಟಿ. ತಿಪ್ಪೇಸ್ವಾಮಿ ಒತ್ತಾಯ

ಸುದ್ದಿಒನ್, ಹಿರಿಯೂರು, ನವೆಂಬರ್. 15 : ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ಕೋಟಿ ಕೋಟಿ ಅನುದಾನ ಬಂದಿದ್ದು, ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಸದೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಲಾಗುತ್ತದೆ.

ಚಿತ್ರದುರ್ಗ | ನವೆಂಬರ್ 18 ರಿಂದ 24 ರವರೆಗೆ ಕಬೀರಾನಂದ ಹಾಗೂ ಕಬೀರೇಶ್ವರರ ಪುಣ್ಯಾರಾಧನೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 15 : ನಗರದ ಕಬೀರಾನಂದ ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಶ್ರೀ ಸದ್ಗುರು ಕಬೀರಾನಂದ

error: Content is protected !!