ಬೆಂಗಳೂರು: ಎಂಎಲ್ಎ ಟಿಕೆಟ್ ಗಾಗಿ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಗೋವಿಂದ ಬಾಬು ಪೂಜಾರಿ ಐದು ಕೋಟಿ ನೀಡಿದ್ದರು ಎಂಬ ಆರೋಪದ ಮೇಲೆ ಹಲವರನ್ನು ಬಂಧನ ಮಾಡಲಾಗಿದೆ. ಇದೀಗ ಆ ಕೇಸ್ ಗೆ ಸಂಬಂಧಿಸಿದಂತೆ ಗೋವಿಂದ ಬಾಬುಗೆ ಕಂಟಕ ಶುರುವಾಗುವ ಸಾಧ್ಯತೆ ಇದೆ.
ಗೋವಿಂದ ಬಾಬು ವಿರುದ್ಧ ಹವಾಲಾ ಟ್ರಾನ್ಸಾಕ್ಷನ್ ಮಾಡಿರುವ ಆರೋಪ ಕೇಳಿ ಬಂದಿದೆ. ಗೋವಿಂದ ಬಾಬಿ ಅವರು ಹವಾಲಾ ವ್ಯವಹಾರ ನಡೆಸಿದ್ದಾರೆ ಎಂದು ಹಿರಿಯ ವಕೀಲ ನಟರಾಜ್ ಶರ್ಮಾ ಹೇಳಿದ್ದಾರೆ. ಹೈಕೋರ್ಟ್ ಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.
ಬಿಜೆಪಿ ಟಿಕೆಟ್ ಪಡೆಯಲು ಐದು ಕೋಟಿ ನೀಡಿದ್ದಾರೆ. ಎರಡು ಕೋಟಿಗಿಂತ ಹೆಚ್ಚು ಕ್ಯಾಶ್ ವ್ಯವಹಾರ ನಡೆಸುವಂತಿಲ್ಲ. ಆದರೂ ಐದು ಕೋಟಿ ಕ್ಯಾಶ್ ಕೊಟ್ಟಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ತಾನೇ ಹವಲಾ ಟ್ರಾನ್ಸಕ್ಷನ್ ಮಾಡಿರುವ ಬಗ್ಗೆ ಪೂಜಾರಿ ಒಪ್ಪಿಕೊಂಡಿದ್ದಾರೆ. ಮುಂಬೈನಲ್ಲಿ ವ್ಯವಹಾರ ಮಾಡಿದ ಪೂಜಾರಿಗೆ ಇದರ ಸುಳಿವು ಇದೆ. ಅಲ್ಲಿ ಮನಿ ಆಕ್ಟಿವಿಟಿಗಳ ಹಬ್ ಆಗಿರುವ ಪ್ರದೇಶವಾಗಿದೆ. ಹವಾಲಾ ದಂಧೆಕೋರರ ಜೊತೆಗೆ ಸಂಪರ್ಕ ಇರುವ ಸಾಧ್ಯತೆ ಇದೆ. ಈ ಬಗ್ಗೆ ಆಳವಾದ ಸೂಕ್ತ ತನಿಖೆಯ ಅವಶ್ಯಕತೆ ಇದೆ ಎಂದೇ ಶರ್ಮಾ ಹೇಳಿದ್ದಾರೆ.