ಕಾವೇರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಆದರೆ ಇದರ ನಡುವೆ ರಾಜ್ಯ ಸರ್ಕಾರ, ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುತ್ತಲೆ ಇದೆ. ಇದನ್ನು ವಿರೋಧಿಸಿ, ಈಗಾಗಲೇ ಮಂಗಳವಾರದಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಇದೀಗ ಕರ್ನಾಟಕದ ಬಂದ್ ಗೂ ಪ್ಲ್ಯಾನ್ ನಡೆಸಲಾಗಿದೆ.
ಕನ್ನಡ ಪರ ಸಂಘಟನೆಗಳು ಈ ನಿರ್ಧಾರ ಮಾಡಿದ್ದಾರೆ. ಕಾವೇರಿ ನೀರು ಬರೀ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಬರೀ ರಾಜ್ಯಕ್ಕೆ ಸೀಮಿತವಲ್ಲ. ಈ ಹೋರಾಟ ಕೇಂದ್ರ ಸರ್ಕಾರಕ್ಕೆ ತಲುಪಬೇಕು. ಹೀಗಾಗಿ ಅಖಂಡ ಕರ್ನಾಟಕ ಬಂದ್ ಮಾಡಬೇಕು ಎಂದು ಕನ್ನಡ ಒಕ್ಕೂಟ ತೀರ್ಮಾನ ಮಾಡಿದೆ. ಸೆಪ್ಟೆಂಬರ್ 29ರಂದು ಬಂದ್ ಗೆ ಕರೆ ನೀಡಿದ್ದಾರೆ.
ಕಾವೇರಿ ನೀರು ಕೂಡ ದಿನೇ ದಿನೇ ಕೂಡ ಕುಸಿತ ಕಾಣುತ್ತಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದೇ ರೈತರಿಗೆ ಆತಂಕ ಸೃಷ್ಡಿಯಾಗಿದೆ. ಹೀಗೆ ತಮಿಳುನಾಡು ಕೇಳಿದೆ ಅಂತ ನೀರು ಬಿಡುತ್ತಾ ಹೋದರೆ, ಬೆಂಗಳೂರಿಗರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ. ಹೀಗಾಗಿ ರೈತರು ಕೃಷಿ ಹಾಗೂ ಕುಡಿಯುವ ನೀರನ್ನು ಉಳಿಸಲು ರೈತರು ಹೋರಾಟ ನಡೆಸುತ್ತಿದ್ದಾರೆ.