ಪುನೀತ್ ಸಾಯುವುದಕ್ಕೂ ಮುನ್ನ ಆ Golden Hours ಬಗ್ಗೆ ಮಾಹಿತಿ ಬೇಕು : ಅಪ್ಪು ಅಭಿಮಾನಿಯ ಒತ್ತಾಯ..!
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗಿಲ್ಲ ಅನ್ನೋದು ಎಷ್ಟು ಕಠೋರವಾದ ಸತ್ಯವೋ ಅವರಿಗೆ ಹಾರ್ಟ್ ಅಟ್ಯಾಕ್ ಆದಾಗ ಟ್ರೀಟ್ಮೆಂಟ್ ಹೇಗಿತ್ತು ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಆ ಉತ್ತರಕ್ಕಾಗಿ ಈಗ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.
ಹೌದು, ಹಾರ್ಟ್ ಅಟ್ಯಾಕ್ ಆದವರಿಗೆ ಗೋಲ್ಡನ್ ಸಮಯ ಅಂತಿರುತ್ತೆ. ಆ ಸಮಯದಲ್ಲಿ ನೀಡುವ ಚಿಕಿತ್ಸೆ ರೋಗಿಗಳಿಗೆ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಅಪ್ಪು ಫ್ಯಾನ್ ಅರುಣ್ ಪರಮೇಶ್ವರ್ ಆ ಸಮಯದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.
ನಮಗೆ ರಮಣ ರಾವ್ ನೀಡಿದ ಚಿಕಿತ್ಸೆ ಬಗ್ಗೆ ಬೇಡ. 15 ನಿಮಿಷದ ಆ ಗೋಲ್ಡನ್ ಟೈಮ್ ಬಗ್ಗೆ ನಮಗೆ ಗೊಂದಲವಿದೆ. ಅದರ ಬಗ್ಗೆ ಆಸ್ಪತ್ರೆಯಿಂದ ಕ್ಲಾರಿಟಿ ಬೇಕು. ಡಾ.ರಮಣ ರಾವ್ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯನ್ನ ರಿವಿಲ್ ಮಾಡಲಿ. ವೈದ್ಯರ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಾವೂ ಹೋರಾಟವನ್ನು ಇಲ್ಲಿಗೆ ನಿಲ್ಲಿಸಲ್ಲ. ಅಪ್ಪು ಸಾವಿಗೆ ನ್ಯಾಯ ಸಿಗುವವರೆಗೂ ಮುಂದುವರೆಸುತ್ತೇವೆ ಎಂದು ಅಪ್ಪು ಸಾವಿನ ತನಿಖೆ ನಡೆಸುವಂತೆ ಒತ್ತಾಯಿಸಿದ್ದ ಅರುಣ್ ಪರಮೇಶ್ವರ್ ತಿಳಿಸಿದ್ದಾರೆ.