Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

3 ದಿನಗಳ ಹಿಂದೆ ಆಕ್ಸಿಡೆಂಟ್ : ಇಂದು ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ..!

Facebook
Twitter
Telegram
WhatsApp

ಬೆಂಗಳೂರು: ಮೂರು ದಿನಗಳ ಹಿಂದೆ ಕಾರಿನಲ್ಲಿ ಹೋಗುವಾಗ ಆಗಿದ್ದ ಆಕ್ಸಿಡೆಂಟ್‌ನಿಂದಾಗಿ ಇಂದು ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಅವರನ್ನ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಐಸಿಯೂನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಆಕ್ಸಿಡೆಂಟ್ ನಲ್ಲಿ ತಲೆಗೆ ಪೆಟ್ಟು ಬಿದ್ದ ಕಾರಣ ಬ್ರೈನ್ ಬಲವಾಗಿ ಹೊಡೆತ ಬಿದ್ದಿದೆ. ಮೆದುಳಿನ ರಕ್ತಸ್ರಾವ ಉಂಟಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಕ್ಸಿಡೆಂಟ್ ಆದ ಬಳಿಕ ಮನೆಯಲ್ಲೆರ ಚಿಕಿತ್ಸೆ ಮುಂದುವರೆಸಿದ್ದರಂತೆ. ಪ್ರತಿದಿನ ಪೂಜೆ ಮಾಡುವಂತೆ ರಾತ್ರಿ ಅಯ್ಯಪ್ಪನ ಪೂಜೆ ಮಾಡಲು ದೇವರ ಕೋಣೆಗೆ ಹೋದಾಗ ಈ ವೇಳೆ ರೂಂ ನಲ್ಲೆ ಕುಸಿದು ಬಿದ್ದಿದ್ದರಂತೆ. ಆಗಲೇ ಆಸ್ಪತ್ರೆಗೆ ಕರೆದುಕೊಂಡು ಬಂದು ಎಲ್ಲಾ ಚೆಕಪ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿರೋ ಕಾರಣ ಆಪರೇಷನ್ ಕೂಡ ಮಾಡೋಕೆ ಆಗಲ್ಲ. ಹೀಗಾಗಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.

ಇನ್ನು ತಂದೆಯವರಿಗೆ ವಯಸ್ಸಾಗಿದೆ. ಎಲ್ಲವನ್ನು ಆ ದೇವರ ಮೇಲೆ ಬಿಟ್ಟಿದ್ದೀವಿ. ಪವಾಡ ನಡೆದರೂ ನಡೆಯಬಹುದು. ಅವರು ಆರೋಗ್ಯವಾಗಿಯೇ ಇದ್ದರು ಆದರೆ ಮನೆಯಲ್ಲೆ ಬಿದ್ದ ಕಾರಣ ಹೀಗಾಗಿದೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾ ಇದ್ರು. ಈ ಒತ್ತಡಗಳ ನಡುವೆ ಸರಿಯಾಗಿ ಊಟ, ತಿಂಡಿ ಮಾಡ್ತಾ ಇರ್ಲಿಲ್ಲ. 8 ರಂದು ಶಬರಿಮಲೆಗೂ ಹೋಗುವ ಫ್ಲ್ಯಾನ್ ನಲ್ಲಿದ್ರು.‌ ಆದ್ರೆ ಈಗ ಈ ರೀತಿ ಆಗಿದೆ ಎಂದು ಅವರ ಪುತ್ರ ಲಕ್ಷ್ಮೀಶ್ ಮಾಹಿತಿ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜನವರಿವರೆಗೂ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸಲು ಆದೇಶ..!

ಚಿತ್ರದುರ್ಗ: ರಾಜ್ಯದ ನಾನಾ ಭಾಗದಲ್ಲಿ ಮಳೆ ಬಿದ್ದಂತೆ ಚಿತ್ರದುರ್ಗದಲ್ಲೂ ಮಳೆಯಾಗಿದ್ದರೆ ಇಷ್ಟೊತ್ತಿಗೆ ವಾಣಿ ವಿಲಾಸ ಜಲಾಶಯ ಕೋಡಿ ಬೀಳುತ್ತಿತ್ತು. ಆದರೆ ಕೋಟೆನಾಡಲ್ಲಿ ಅಷ್ಟೊಂದು ಮಳೆಯಾಗಲಿಲ್ಲ. ಆದರೂ ವಾಣಿ ವಿಲಾಸ ಜಲಾಶಯಕ್ಕೆ ನೀರು ಬಂದಿದೆ. ಇನ್ನೇನು

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

    ಸುದ್ದಿಒನ್, ಚಿತ್ರದುರ್ಗ, ನವಂಬರ್. 27 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ನವೆಂಬರ್. 27 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ

ಹೆಚ್ಚುತ್ತಿದೆ ಫ್ಲೂ ಸೋಂಕು : ಜನರು ಮುನ್ನೆಚ್ಚರಿಕೆ ಹೇಗೆ ವಹಿಸಬೇಕು..?

ಬೆಂಗಳೂರು: ಇತ್ತೀಚೆಗೆ ವಾತಾವರಣದಲ್ಲಿ ವಿಚಿತ್ರವಾದ ಬದಲಾವಣೆಯಾಗುತ್ತಿದೆ. ಜೋರು ಬಿಸಿಲು ಬರುತ್ತೆ ಎನ್ನುವಾಗಲೇ ಮಳೆ ಬರುತ್ತದೆ. ಈಗ ಚಳಿಗಾಲ ಶುರುವಾಗಿದೆ ಎನ್ನುವಾಗಲೇ ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದ ರಾಜ್ಯದಲ್ಲಿಯೂ ಮಳೆಯ ವಾತಾವರಣ ಸೃಷ್ಟಿಯಾಗಿದೆ. ಅಲ್ಲಲ್ಲಿ ಮಳೆಯೂ

error: Content is protected !!