ತುಮಕೂರು: ಶಾಸಕನನ್ನಾಗಿ ಮಾಡುವುದು ಗ್ರಾಮಗಳ ಉದ್ದಾರ ಮಾಡಲಿ, ಜನರಿಗಾಗಿ ಏನನ್ನಾದರೂ ಮಾಡಲಿ ಎಂಬುದಕ್ಕೆ. ಆದರೆ ಜನರಿಂದ ಆಯ್ಕೆಯಾದ ಕೆಲ ಜನಪ್ರತಿನಿಧಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅನುಭವಿಸುತ್ತಾ ಕೂತು ಬಿಡುತ್ತಾರೆ. ಆದ್ರೆ ಮತ್ತದೆ ಚುನಾವಣೆ ಬಂದ್ರೆ ಜನ ರೊಚ್ಚಿಗೇಳುತ್ತಾರೆ ಎಂಬುದನ್ನು ಮರೆತು ಬಿಡುತ್ತಾರೆ. ಅಂಥದ್ದೊಂದು ಘಟನೆ ಕುಣಿಗಲ್ ನಲ್ಲಿ ನಡೆದಿದೆ.
ಜಿಲ್ಲೆಯ ಬಿಸೇಗೌಡನದಿಡ್ಡಿಯಲ್ಲಿ ರಸ್ತೆ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮವಿತ್ತು. ಅಲ್ಲಿಗೆ ಕುಣಿಗಲ್ ಶಾಸಕ ರಂಗನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಅದರಂತೆ ಕಾರ್ಯಕ್ರಮ ಉದ್ಘಾಟನೆಗೆ ಹೋಗಿದ್ದರು. ಈ ವೇಳೆ ಜನ ಮುತ್ತಿಗೆ ಹಾಕಿದ್ದಾರೆ.
ಗುದ್ದಲಿ ಪೂಜೆಯನ್ನು ಮಾಡುವುದಕ್ಕೆ ಬಿಡದ ಜನ, ಯಾರು ನೀವೂ ಪೂಜೆ ಮಾಡುವುದಕ್ಕೆ..? ಮೊದಲು ಕೆಲಸ ಮಾಡಿ ಆಮೇಲೆ ಗುದ್ದಲಿ ಪೂಜೆ ಮಾಡಿವಂತೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಕಡೆಗೂ ಅಲ್ಲಿ ನಿಲ್ಲುವುದಕ್ಕೆ ಬಿಡದೆ ವಾಪಾಸ್ ಕಳುಹಿಸಿದ್ದಾರೆ. ಈ ಹಿಂದೆ ಕುಕ್ಕರ್ ಹಂಚುವಾಗಲೂ ಕ್ಲಾಸ್ ತೆಗೆದುಕೊಂಡಿದ್ದರು. ಮೊದಲು ಕೆಲಸ ಮಾಡಿ ಆಮೇಲೆ ಕುಕ್ಕರ್ ಹಂಚಿ ಎಂದಿದ್ದರು.