ಸುದ್ದಿಒನ್, ಚಿತ್ರದುರ್ಗ, ನವಂಬರ್.10 : ಮುರುಘಾಮಠದ ಡಾ. ಶಿವಮೂರ್ತಿ ಮುರುಘಾಶರಣರು ಇಂದೇ ಬಿಡುಗಡೆಯಾಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಒಂದು ಪ್ರಕರಣಕ್ಕೆ ಬುಧವಾರ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಆದರೆ ಇನ್ನು ಬಿಡುಗಡೆಯಾಗಿಲ್ಲ. ಏಳು ಷರತ್ತುಗಳೊಂದಿಗೆ ಜಾಮೀನು ನೀಡಲಾಗಿತ್ತು. ಇದರ ನಡುವೆ ಪೋಕ್ಸೊ ಕಾಯಿದೆಯಡಿ ದಾಖಲಾಗಿರುವ ಪ್ರಕರಣ ಸಂಬಂಧ ಇನ್ನು ಜಾಮೀನು ಸಿಕ್ಕಿಲ್ಲ.
ಇಂದು ಮುರುಘಾ ಶರಣರ ಪರ ವಕೀಲರು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹೈಕೋರ್ಟ್ ಜಾಮೀನು ನೀಡಿರುವ ಅರ್ಜಿಯನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಹೀಗಾಗಿ ಇಂದು ಬಹುತೇಕ ಬಿಡುಗಡೆಯಾಗುತ್ತಾರೆಂಬ ಎಂದು ಕುತೂಹಲ ಎಲ್ಲರಲ್ಲೂ ಇದೆ.
ಮುರುಘಾ ಶ್ರೀಗಳಿಗೆ ಈಗಾಗಲೇ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಏಳು ಷರತ್ತುಗಳೊಂದಿಗೆ ಜಾಮೀನು ಸಿಕ್ಕಿದ್ದು, ಅದರಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡುವಂತಿಲ್ಲ ಎಂದು ಷರತ್ತು ವಿಧಿಸಿದೆ. ಅದರ ಜೊತೆಗೆ ಇನ್ನೊಬ್ಬರು ಸಾಕ್ಷಿಯನ್ನು ಹಾಕಬೇಕಾಗಿದೆ. ಈಗ ಪೋಕ್ಸೊ ಕಾಯಿದೆಯಡಿ ದಾಖಲಾದ ಪ್ರಕರಣಕ್ಕೂ ಜಾಮೀನು ಸಿಗುತ್ತಾ..? ಅಥವಾ ಈಗ ಸಿಕ್ಕಿರುವ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾ ಎಂದು ಕಾದು ನೋಡಬೇಕಿದೆ.