ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದು, ಶಾಲಾ ಕಾಲೇಜಿನಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ ಎಂದಿದೆ. ಆದ್ರೆ ಕೆಲವು ಕಡೆ ಮಕ್ಕಳು ಈಗಲೂ ಹಿಜಾಬ್ ಗೆ ಅನುಮತಿಸದೆ ಇದ್ದರೆ ಪರೀಕ್ಷೆ ಬರೆಯಲ್ಲ ಎಂದು ಕುಳಿತಿದ್ದಾರೆ.
ಈ ವಿಚಾರ ಇಂದು ಸದನದಲ್ಲೂ ಸದ್ದು ಮಾಡಿದ್ದು, ಹಿಜಾಬ್ ವಿವಾದ ವೇಳೆ ಪರೀಕ್ಷೆ ವಂಚಿತರಿಗೆ ಅವಕಾಶ ವಿಚಾರವನ್ನ ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿದ್ದಾರೆ. ಪರೀಕ್ಷೆಗೆ ತಪ್ಪಿಸಿಕೊಂಡರೆ ಮರು ಪರೀಕ್ಷೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಕೋರ್ಟ್ ಮಧ್ಯಂತರ ಆದೇಶ ಬಳಿಕ ತಪ್ಪಿಸಿಕೊಂಡರೆ ಸಾಧ್ಯವಿಲ್ಲ. ನಾವೂ ಒಂದು ವ್ಯವಸ್ಥೆಯಲ್ಲಿ ಇದ್ದೇವೆ. ಅಲ್ಲಿನ ಕಾನೂನು ಕೋರ್ಟ್ ಆದೇಶವನ್ನ ಪಾಲಿಸಬೇಕು ಎಂದಿದ್ದಾರೆ.
ಈಗ ಅದಕ್ಕೆ ಅವಕಾಶ ನೀಡಿದರೆ ಬೇರೆ ರೀತಿಯಾಗುತ್ತದೆ. ಮಧ್ಯಂತರ ಆದೇಶಕ್ಕೂ ಮೊದಲು ಪರೀಕ್ಷೆ ಬರೆಯದವರಿಗೆ ಮತ್ತೆ ಅವಕಾಶ ನೀಡುವ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆ ಎಂದಿದ್ದಾರೆ.