ಬೆಂಗಳೂರು: ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದರು. ರಾಜ್ಯದಲ್ಲಿ ಅಕ್ಟೋಬರ್ವರೆಗೆ 9,39,000 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಯಾವುದೇ ರೀತಿಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದರು.
ರಾಜ್ಯದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಅಕ್ಟೋಬರ್ 2021 ರಿಂದ ಮಾರ್ಚ್ 2022 ರವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರಗಳಿಗೆ 16 ಲಕ್ಷದ 94 ಸಾವಿರ ಮೆಟ್ರಿಕ್ ಟನ್ ಬೇಡಿಕೆಯಿದ್ದು, ಅಕ್ಟೋಬರ್ 2021ರ ಅಂತ್ಯದವರೆಗೆ 2,80,456 ಮೆಟ್ರಿಕ್ ಟನ್ ವಿವಿಧ ಗ್ರೇಡ್ಗಳ ರಸಗೊಬ್ಬರಗಳಿಗೆ ಬೇಡಿಕೆ ಇದೆ.
ಸೆಪ್ಟೆಂಬರ್ 2021ರ ಅಂತ್ಯದವರೆಗೆ 7,08850 ಮೆಟ್ರಿಕ್ ಟನ್ ಒಳಗೊಂಡಂತೆ ಅಕ್ಟೋಬರ್ 2,30,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ಗಳ ರಸಗೊಬ್ಬರ ಸರಬರಾಜಾಗಿದೆ ಎಂದು ತಿಳಿಸಿದ್ದಾರೆ.ಒಟ್ಟು ರಾಜ್ಯದಲ್ಲಿ ಅಕ್ಟೋಬರ್ಗೆ 9,39,000 ಮೆಟ್ರಿಕ್ ಟನ್ ಲಭ್ಯವಿರುತ್ತದೆ. 26/10/2021ರವರೆಗೆ 3,33,000 ಮೆಟ್ರಿಕ್ ಮಾರಾಟವಾಗಿದೆ. ಉಳಿದ 6,05,760 ಮೆಟ್ರಿಕ್ ಟನ್ ರಸಗೊಬ್ಬರ (ಡಿಎಪಿ 33,570 ಮೆಟ್ರಿಕ್ ಟನ್, ಎಂಒಪಿ 28,420 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 3,16,140 ಮೆಟ್ರಿಕ್ ಟನ್ ಹಾಗೂ ಯೂರಿಯಾ 2,27,630 ಮೆಟ್ರಿಕ್ ಟನ್) ದಾಸ್ತಾನು ಇದೆ ಎಂದಿದ್ದಾರೆ.
ಮುಂಗಾರು ಹಂಗಾಮಿನಲ್ಲಿ 26,47,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ನ ರಸಗೊಬ್ಬರಕ್ಕೆ ಬೇಡಿಕೆಯಿರುವುದನ್ನು ಯಾವುದೇ ಕೊರತೆಯಿಲ್ಲದೇ ಪೂರೈಸಲಾಗಿದೆ. ಆರಂಭಿಕ ಶಿಲ್ಕು(11,54,320 ಮೆ.ಟ)ಹಾಗೂ 24 ಲಕ್ಷ ಮೆಟ್ರಿಕ್ ಟನ್ ಸರಬರಾಜು ಒಳಗೊಂಡಂತೆ ಒಟ್ಟು 35,63,000 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಮುಂಗಾರಿನಲ್ಲಿ ಪೂರೈಸಲಾಗಿದೆ. ಮುಂಗಾರಿನಲ್ಲಿ 28,54,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ನ ರಸಗೊಬ್ಬರ ಮಾರಾಟವಾಗಿದ್ದು, ಪೂರೈಕೆಯ ಬಳಿಕವೂ ಸೆಪ್ಟೆಂಬರ್ 2021 ಅಂತ್ಯಕ್ಕೆ ಸೆಪ್ಟೆಂಬರ್ 2021ರ ಅಂತ್ಯದವರೆಗೆ 7,08850 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ಈ ದಾಸ್ತಾನನ್ನು ಹಿಂಗಾರಿಗೂ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.