ಕುರುಗೋಡು. ಆ.19
ರೈತರು ತಮ್ಮ ಜಮೀನು ಗಳಿಗೆ ನೀರಾವರಿ ಕಲ್ಪಿಸಿಕೊಳ್ಳಲು ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅಳವಡಿಸಿದ್ದ 5 ಎಚ್. ಪಿ
ಪಂಪ್ ಸೆಟ್ ಮೋಟರ್ ಗಳನ್ನು ಇಬ್ಬರು ಕಳ್ಳರು ಕಳ್ಳತನ ಮಾಡಿದ್ದು, ಆರೋಪಿಗಳನ್ನು ಸಿರಿಗೇರಿ ಪೊಲೀಸರು ಬಂಧಿಸಿದ್ದಾರೆ.
ಸಿರಿಗೇರಿ ಗ್ರಾಮದ ಜಡೆಪ್ಪ ಎಂಬ ರೈತರು ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ಲೂಬಿ ಕಂಪನಿಯ 5 ಎಚ್. ಪಿ ನೀರೇತ್ತುವ ಮನೋ ಬ್ಲಾಕ್ ಪಂಪ್ ಸೆಟ್ ಕಳುವಾದ ಬಗ್ಗೆ ಸಿರಿಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನ ಅನ್ವಯ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್ಪಿ ನಟರಾಜ್, ಡಿವೈಎಸ್ಪಿ ವೆಂಕಟೇಶ್, ತೆಕ್ಕಲಕೋಟೆ ಸಿಪಿಐ ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ಸಿರಿಗೇರಿ ಪಿಎಸ್ ಐ ಸದ್ದಾಂ ಹುಸೇನ್ ಹೆಚ್. ಅವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಸದರಿ ತಂಡವು ಈ ಪ್ರಕರಣವನ್ನು ಭೇದಿಸಿ ಸಿರಿಗೇರಿ ಗ್ರಾಮದ ಕೆ. ಮಾರುತಿ (20). ಕರಿಬಸವ (25) ಈ ಆರೋಪಿಗಳನ್ನು ಬಂಧಿಸಿ ಬಂದಿತರಿಂದ ವಿವಿಧ ಕಂಪನಿಗಳ 5 ಪಂಪ್ ಸೆಟ್ ಗಳ ಮೋಟರನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿರಿಗೇರಿ ಪೊಲೀಸರು ತಿಳಿಸಿದ್ದಾರೆ.
ಈ ತಂಡದಲ್ಲಿ ಸಿರಿಗೇರಿ ಠಾಣೆಯ ಎಎಸ್ ಐ ಹೆಚ್. ಗಂಗಣ್ಣ, ಸಿಬ್ಬಂದಿಯಾದ ಉಮಾಶಂಕರ್, ಶಿವರಾಯಪ್ಪ, ಹುಲಿಕುಂಟೆಪ್ಪ, ಮಂಜುನಾಥ್, ರಮೇಶ್, ಚಂದ್ರಶೇಖರ, ರಾಮಕೃಷ್ಣ, ಪ್ರಭಾಕರ್, ವಿನೋದ್ ಗೌಡ, ರಂಗಣ್ಣ, ದಿವಾಕರ್ ಪಾಲ್ಗೊಂಡಿದ್ದರು.
ಬಜೆಟ್ ಲೆಕ್ಕಚಾರ ; ಜನರಿಗಿಂತ ಸಚಿವರಿಗೆ ನಿರೀಕ್ಷೆ, ತುಮಕೂರಿಗೆ ಹೆಚ್ಚು ಅನುದಾನ ತರುವ ತವಕ..!! ಬೆಂಗಳೂರು; ಮಾರ್ಚ್ 7 ರಾಜ್ಯ…
ಸುದ್ದಿಒನ್ ಪ್ರತಿದಿನ ಬೆಳಿಗ್ಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿದ ಪಾನೀಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಂಬೆ ಮತ್ತು ಅರಿಶಿನ…
ಈ ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಈ ರಾಶಿಯವರು ಎಷ್ಟೇ ದುಡಿದರು ಹಣಕಾಸಿನ ಸಮಸ್ಯೆ ಬಗೆಹರಿಯುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ…
ಚಿತ್ರದುರ್ಗ. ಫೆ.21: ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಆದರೆ ಇದುವರೆಗೂ ಇ-ಖಾತಾ ಪಡೆಯದೇ ಇರುವ ಕಟ್ಟಡಗಳ…
ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ…
ಮೈಸೂರು: ತಾಯಿ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳಿಂದ ಅವಸ್ಥೆಯಾಗಿದೆ. ಮೊದಲೇ ಬಿಸಿಲಿಗೆ ಒಣಗಿದ ಬೆಟ್ಟಕ್ಕೆ ಕಿಡಿತಾಕಿಸಿದ್ದಾರೆ. ಇದೀಗ ಆ ಕಿಡಿ ಜೋರಾಗಿಯೇ…